ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯಮಟ್ಟದ ಭರತನಾಟ್ಯ, ಜಾನಪದ ನೃತ್ಯ ಸ್ಪರ್ಧೆ

ಬೆಂಗಳೂರು : ನಗರದ ಶ್ರೀ ನಾಟ್ಯಂ ಕಲಾ ಕೇಂದ್ರದ ೧೫ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ – ೨೦೨೪ ಆಯೋಜಿಸಿದೆ . ಬೆಂಗಳೂರಿನ ಶ್ರೀನಿಧಿ ಬಡಾವಣೆಯ ೮ ನೇ ಮುಖ್ಯರಸ್ತೆಯಲ್ಲಿರುವ ಶ್ರೀನಿಧಿ ಸಭಾಂಗಣದಲ್ಲಿ ಡಿ. ೨೨ರ ಬೆಳಗ್ಗೆ ೧೦ಕ್ಕೆ ಸ್ಪರ್ಧೆ ನಡೆಸಲಾಗುತ್ತದೆ ಎಂದು ಶಿವಮೊಗ್ಗ ಮೂಲದ ಖ್ಯಾತ ವಿದುಷಿ ಪುಷ್ಪಲತಾ ತಿಳಿಸಿದ್ದಾರೆ.

ಎರಡು ಪ್ರಾಕಾರದ ಸ್ಪರ್ಧೆ:
ಭರತನಾಟ್ಯ ಮತ್ತು ಜಾನಪದ ನೃತ್ಯ – ವಿಭಾಗಗಳಲ್ಲಿ ಪ್ರತ್ಯೇಕವಾದ ಸ್ಪರ್ಧೆ ನಡೆಯಲಿದೆ. ೮ ವರ್ಷದ ಒಳಗಿನವರು, ಎಂಟರಿಂದ ೧೨ರಿಂದ ವರ್ಷದವರು, ೧೬ ವರ್ಷ ಮೇಲ್ಪಟ್ಟವರ ಒಟ್ಟು ಮೂರು ವಿಭಾಗಗಳಲ್ಲಿ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಸಮಾಧಾನಕರ ಬಹುಮಾನ ವಿತರಣೆಯೂ ನಡೆಯಲಿದೆ.
ಆಸಕ್ತ ಸ್ಪರ್ಧಿಗಳು ಸ್ಪರ್ಧಾ ಸಂದರ್ಭದಲ್ಲಿ ತಮ್ಮ ಜನ್ಮ ದಿನಾಂಕ ಖಾತರಿ ಪಡಿಸುವ ಆಧಾರ್ ಅಥವಾ ಯಾವುದೇ ದಾಖಲೆಗಳ ಪ್ರತಿಗಳನ್ನು ತರಬೇಕು. ಹೆಸರು ನೋಂದಣಿ ಮತ್ತು ವಿವರಗಳಿಗೆ ೯೯೦೦೦೮೮೯೮೩ ಮತ್ತು ೯೫೧೩೮೧೬೬೪೯ ಸಂಪರ್ಕಿಸಬಹುದು ಎಂದು ವಿದುಷಿ ಪುಷ್ಪಲತಾ ತಿಳಿಸಿದ್ದಾರೆ.

ಸಂಸ್ಥೆಯ ಹಿರಿಮೆ:
ಬೆಂಗಳೂರಿನ ಕೋಣನ ಕುಂಟೆಯಲ್ಲಿ ೨೦೦೯ರಲ್ಲಿ ಶಿವಮೊಗ್ಗ ಮೂಲದ ವಿದುಷಿ ಪುಷ್ಪಲತಾ ಅವರಿಂದ ಚಾಲನೆಗೊಂಡ ಶ್ರೀ ನಾಟ್ಯಂ ಕಲಾ ಕೇಂದ್ರವು ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲೆಯನ್ನು ಧಾರೆ ಎರೆದಿದೆ. ಮಕ್ಕಳಿಗೆ ಮಹತ್ವದ ಸೇವೆಯನ್ನು ಮಾಡುತ್ತ ಲೇ ರಾಜ್ಯದ ಪ್ರತಿಷ್ಠಿತ ಕರಾವಳಿ ಉತ್ಸವ , ಹಂಪಿ ಉತ್ಸವ, ಪಟ್ಟದಕಲ್ಲು ಉತ್ಸವ ಮತ್ತು ಮೈಸೂರು ದಸರಾ ಸೇರಿದಂತೆ ನೂರಾರು ಕಾರ್ಯಕ್ರಮಗಳಲ್ಲಿ ತನ್ನ ಛಾಪನ್ನು ಒತ್ತಿದೆ.
ವಿದುಷಿ ಪುಷ್ಪಲತಾ ನೇತೃತ್ವದ ಈ ತಂಡ ಕಳೆದ ವರ್ಷ ಪಾಂಡಿಚೇರಿ ಮತ್ತು ಚಿದಂಬರಂನಲ್ಲಿ ಹಮ್ಮಿಕೊಂಡಿದ್ದ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆಯ ಬೃಹತ್ ನೃತ್ಯ ಪ್ರಸ್ತುತಿಗಳಲ್ಲಿ ತನ್ನ ವಿಶೇಷತೆಯನ್ನು ಪ್ರದರ್ಶಿಸಿರುವುದು ವಿಶ್ವ ಮಾನ್ಯತೆಯನ್ನು ತಂದುಕೊಟ್ಟಿದೆ. ರಂಗ ಪ್ರವೇಶವನ್ನೂ ಮಾಡಿಸಿ ನವ, ಯುವ ಕಲಾವಿದರಿಗೆ ಶ್ರೀ ನಾಟ್ಯಂ ಸಂಸ್ಥೆ ಮನ್ನಣೆ ಒದಗಿಸಿದೆ.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ