
ಕೊಪ್ಪಳ: ನಗರದ ಕಿನ್ನಾಳ ರಸ್ತೆಯ ಶಾಂತಿ ನಿಕೇತನ ಶಾಲಾ ಆವರಣದಲ್ಲಿರುವ ಸೇಂಟ್ ಪಾಲ್ಸ್ ಕಾಲೇಜಿನಲ್ಲಿ ಇದೇ ಭಾನುವಾರ ಡಿ. 15 ರಂದು ಬೆಳಿಗ್ಗೆ 10. 30 ಗಂಟೆಗೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಚುಟುಕು
ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.
ಉದ್ಘಾಟಕರಾಗಿ ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ಮಹಾಂತೇಶ ಮಲ್ಲನ ಗೌಡರ, ಮುಖ್ಯ ಅತಿಥಿಗಳಾಗಿ ಗಜಲ್ ಕವಿಯತ್ರಿ ಅರುಣಾ ನರೇಂದ್ರ, ಸಾಹಿತಿ ಶ್ರೀಮತಿ ಶಾರದಾ ಶ್ರಾವಣ ಸಿಂಗ್ ರಜಪೂತ, ವೀರಣ್ಣ ವಾಲಿ, ಉಪನ್ಯಾಸಕ ಡಾ. ಪ್ರವೀಣ ಪೋ.ಪಾಟೀಲ್ , ಸೆಂಟ್ ಪಾಲ್ಸ್ ಸಂಸ್ಥೆಯ ಮುಖ್ಯಸ್ಥ ಬಸವರಾಜ್ ಸಂಕಣಗೌಡರ್ ಅವರು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.
ಕಾರಟಗಿ ಉಪನ್ಯಾಸಕ ವಿರೂಪಾಕ್ಷೇಶ್ವರ ಸ್ವಾಮಿ ಅವರು ಚುಟುಕು ಸಾಹಿತ್ಯ ಒಂದು ಅವಲೋಕನ ಕುರಿತು ಉಪನ್ಯಾಸ ನೀಡಲಿದ್ದಾರೆ.
