ಶಿವಮೊಗ್ಗ: ನಗರದ ಪತ್ರಕರ್ತ ಎಂ. ಶ್ರೀನಿವಾಸನ್ ರಚಿಸಿರುವ ನೂತನ ಕೃತಿ “ನನ್ನ ಕೃಷ್ಣ” ಡಿ 15 ರ ಭಾನುವಾರ ಸಂಜೆ 5:30ಕ್ಕೆ ಬಿಡುಗಡೆಗೊಳ್ಳಲಿದೆ.
ನಗರದ ವಾಸವಿ ಶಾಲೆಯ ಚಿಗುರು ಸಭಾಂಗಣದಲ್ಲಿ ಶಾಸಕ ಎಸ್.ಎನ್. ಚೆನ್ನಬಸಪ್ಪ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಖ್ಯಾತ ಲೇಖಕ ಡಾ. ಗಜಾನನ ಶರ್ಮ ಕೃತಿಯ ಬಗ್ಗೆ ಮಾತನಾಡಲಿದ್ದಾರೆ.
ಆಯೋಜಕ ಸಂಸ್ಥೆಯಾದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧ್ಯಕ್ಷ ಡಾ. ಎನ್. ಸುಧೀಂದ್ರ ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.
- ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
