ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಿರಿಬಿ ರಸ್ತೆಯಲ್ಲಿ ಇರುವ ಇಂದು ಕಾಲೇಜಿನಲ್ಲಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಹದಿನೈದನೇ ವರ್ಷದ ಸ್ವರ ಶ್ರಧ್ಧಾಂಜಲಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಪುಟ್ಟರಾಜ ಗವಾಯಿಗಳಿಗೆ ಸ್ವರ ನಮನ ಕಾರ್ಯಕ್ರಮದಲ್ಲಿ ಮೊದಲಿಗೆ ವೇದಿಕೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಇಂದು ಕಾಲೇಜಿನ ಆಡಳಿತಾಧಿಕಾರಿ ಗಳಾದ ಹೆಚ್ ಎನ್. ವೀರಭದ್ರಪ್ಪ ರವರು ಮಾತನಾಡಿ ಸಂಗೀತಕ್ಕೆ ಸಾವನ್ನು ಗೆಲ್ಲುವ ಶಕ್ತಿ ಇದೆ. ಸಾಹಿತ್ಯ ಸಂಗೀತದ ಆಸಕ್ತಿಯನ್ನು ವಿದ್ಯಾರ್ಥಿಗಳೆಲ್ಲರೂ ಬೆಳಿಸಿಕೊಳ್ಳಬೇಕು.
ಈ ಕಾರ್ಯಕ್ರಮದಿಂದ ಪ್ರೇರಿತರಾಗಿ ನಾನು ಸಹ ಮುಂದೊಂದು ದಿನ ಗಾಯಕ, ಗಾಯಕಿಯಾಗುತ್ತೇನೆ ಎಂಬ ಛಲ ಬಂದು ಉತ್ತಮ ಗಾಯಕರಾಗಬೇಕು ಅತ್ಯುತ್ತಮ ಕೇಳುಗರಾಗಬೇಕು ಸಂಗೀತಾಸಕ್ತಿ ಬೆಳೆಸಿಕೊಳ್ಳಬೇಕು ಎಂಬ ಆಶಯ ಈ ಕಾರ್ಯಕ್ರಮದ್ದಾಗಿದೆ ಎಂದರು.
ಹಾಗೆಯೇ ಸಮಿತಿಯ ಅಧ್ಯಕ್ಷರಾದ ಸುಧಾಕರ ಗೌಡ ಪಾಟೀಲ್ ರವರು ಮಾತನಾಡಿ ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧ ಮಕ್ಕಳಿಗೆ ಬೆಳಕಾದವರು ಅವರಿಗೆ ವಿದ್ಯ ಹೇಳಿಕೊಟ್ಟು ಬದುಕು ರೂಪಿಸಿದ ಮಹಾನುಭಾವರು ಎಂದು ಭಾವುಕರಾದರು.
ಈ ಕಾರ್ಯಕ್ರಮವನ್ನು ಕಾಲೇಜಿನ ಸಿಬ್ಬಂದಿ ದಿನೇಶ್ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರು ವಿಧ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
