ಬೆಳಗಾವಿ : ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಪಾಕಿಸ್ತಾನದಿಂದ ಭಾರತಕ್ಕೆ ತೆರಳಿದ ಹಿಂದೂಗಳ ಆಸ್ತಿಯನ್ನು ಸರ್ಕಾರದ ಆಸ್ತಿ ಎಂದು ಪಾಕಿಸ್ತಾನವು ಮುಟ್ಟುಗೋಲು ಹಾಕಿಕೊಂಡರೆ ಭಾರತದಲ್ಲಿ ವಾಸವಿದ್ದು ಪಾಕಿಸ್ತಾನಕ್ಕೆ ತೆರಳಿದ ಮುಸ್ಲಿಮರ ಆಸ್ತಿಯನ್ನು ರಕ್ಷಿಸಲು ಸ್ಥಾಪಿಸಿದ ಅರ್ಥವಿಲ್ಲದ ಕಾಯಿದೆ ಇಂದು ತಲೆತಲಾಂತರದಿಂದ ಕಾಯ್ದುಕೊಂಡು ಬಂದ ಹಿಂದೂಗಳ ಮನೆ, ಜಮೀನು, ತೋಟ, ದೇವಸ್ಥಾನ ಪ್ರತಿಯೊಂದು ಆಸ್ತಿಗಳ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಆಡಳಿತಾರೂಢ ಸರ್ಕಾರವು ತನ್ನ ತುಷ್ಟೀಕರಣ ನೀತಿಗಾಗಿ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ದುರಂತವೆಂದು ಪ್ರತಿಪಾದಿಸಿದರು.
ಶಿವಮೊಗ್ಗ ನಗರದಲ್ಲಿ ಕಾನೂನುಬಾಹಿರವಾಗಿ ಸಾರ್ವಜನಿಕರಿಗೆ ಸಂಬಂಧಪಟ್ಟ ಆಸ್ತಿಗಳಾದ ಡಿಸಿ ಆಫೀಸ್ ಮುಂಭಾಗದ ಪ್ರಾರ್ಥನಾ ಮೈದಾನ, ವಿನಾಯಕ ಟಾಕೀಸ್ ಪಕ್ಕದ ಮೈದಾನ ಮತ್ತು ಐತಿಹಾಸಿಕ ಸ್ಥಳವಾದ ನ್ಯೂ ಮಂಡಳಿಯಲ್ಲಿರುವ ರಾಜವಂಶಸ್ಥರ ಸಮಾಧಿ ಸ್ಥಳಗಳನ್ನು ವಕ್ಫ್ ಆಸ್ತಿಯೆಂದು ಸೂಚಿಸಲು ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು ಈ ಅನ್ಯಾಯವನ್ನು ಸರಿದೂಗಿಸಿ ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕರಿಗೆ ಸಂಬಂಧಪಟ್ಟ ಸ್ಥಳಗಳನ್ನು ವಕ್ಫ್ ಆಸ್ತಿ ಎಂದು ಪರಿಗಣಿಸುವ ಪ್ರಯತ್ನವನ್ನು ತಕ್ಷಣವೇ ನಿಲ್ಲಿಸಬೇಕೆಂದು ದಾಖಲೆ ಸಹಿತವಾಗಿ ಸದನದಲ್ಲಿ ಹಾಗೂ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರಿಗೆ ಈ ವಿಷಯದ ಬಗ್ಗೆ ಕೂಡಲೇ ಗಮನಹರಿಸಬೇಕಾಗಿ ತಿಳಿಸಲಾಯಿತು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
