ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಸಂಬಂಧಿತ ದೂರು ಮತ್ತು ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಸಾರ್ವಜನಿಕ ಜನ ಸಂಪರ್ಕ ಸಭೆಯಲ್ಲಿ ಆಯೋಜಿಸಲಾಗಿತ್ತು.
ಚೆಸ್ಕಾಂ ಕೊಳ್ಳೇಗಾಲ ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ತಬಸ್ಸು ಅಪ್ಸ ಬಾನು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ರೈತರು ಹಾಗೂ ವಿದ್ಯುತ್ ಗ್ರಾಹಕರ ದೂರುಗಳನ್ನು ಆಲಿಸಿ ಬಳಿಕ ಮಾತನಾಡಿದ ಅವರು ರೈತರು ಹಾಗೂ ಗ್ರಾಹಕರು ನೀಡಲಾಗಿರುವ ದೂರು ಮತ್ತು ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲು ಸೂಕ್ತ ಕ್ರಮ ವಹಿಸಲಾಗುವುದು. ರೈತರು ಮತ್ತು ಗ್ರಾಹಕರು ಕೂಡ ಸೆಸ್ಕ್ ನಿಗಮಕ್ಕೆ ಸಹಕಾರ ನೀಡಬೇಕು. ಹಾಡಿಗಳಿಗೆ ಈಗಾಗಲೇ ವಿದ್ಯುತ್ ಸೌಕರ್ಯ ಒದಗಿಸಲು ಸರ್ಕಾರ ಮುಂದಾಗಿದೆ. ಸರ್ವೆ ಕ್ರಿಯೆ ಯೋಜನೆ ಸಿದ್ಧಪಡಿಸಿ ಅರಣ್ಯ ಇಲಾಖೆ ನೀತಿ ನಿಯಮಗಳು ಸಹಕಾರದೊಂದಿಗೆ ವಿದ್ಯುತ್ ಸೌಕರ್ಯ ಒದಗಿಸಲಾಗುವುದು. ರಾತ್ರಿ ವೇಳೆ ಸಿಂಗಲ್ ಫೀಸ್ ಒದಗಿಸಲು ಅನುಮತಿಗಾಗಿ ಕಳಿಸಿಕೊಡಲಾಗಿದೆ ಎಂಬುದು ಸೇರಿದಂತೆ ಇನ್ನಿತರ ವಿಷಯಗಳನ್ನು ಆದ್ಯತೆ ಮೇರೆಗೆ ಗಣನೆಗೆ ತೆಗೆದುಕೊಂಡು ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕೌದಳ್ಳಿ ಮತ್ತು ರಾಮಪುರ ಭಾಗದ ಶಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರೈತರು ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗಾಗಿ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಾರೆ ಎಂದು ರೈತ ಮುಖಂಡರು ಸಭೆಯಲ್ಲಿ ಆರೋಪಿಸಿದರು. ಅಲ್ಲದೆ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. ಮಾರ್ಟ ಳ್ಳಿ ಭಾಗದ ಕೆಲವು ಗ್ರಾಮಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿದರು. ಖಾಲಿ ನಿವೇಶನದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ವಿದ್ಯುತ್ ಕಂಬ ಮತ್ತು ತಂತಿ ಇರುವುದರಿಂದ ತೆರೆಯಗೊಳಿಸಬೇಕೆಂದು ಪಟ್ಟಣದ ಪ್ರಭುಸ್ವಾಮಿ ಮನವಿ ಮಾಡಿದರು.
ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಶಾಂತರಾಜು ಮತ್ತು ಅಮ್ಜದ್ ಖಾನ್ ರವರು ಸಾರ್ವಜನಿಕರ ಸಂಬಂಧಿತ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ಪಾಲಕ ಅಭಿಯಂತರ ಶಂಕರ, ಸಹಾಯಕ ಅಭಿಯಂತರ ರಂಗಸ್ವಾಮಿ, ಜೆಇಗಳಾದ ರಘುನಂದನ್, ಆನಂದ್ ಕುಮಾರ್, ಮಾದೇಶ್, ನವೀನ್,ಮಹೇಶ್ ಗ್ರಾಹಕರು, ರೈತರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
