ಶಿವಮೊಗ್ಗ : ಡಿ. ೨೧ನೇ ಶನಿವಾರದಂದು ಅಶೋಕ್ ನಗರ ಮುಖ್ಯ ರಸ್ತೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರು ಕಿರಣ್ ಕುಮಾರ್.ಎಚ್.ಎಸ್ ತಿಳಿಸಿದರು.
ಅಂದು ಭುವನಗಿರಿಯಿಂದ ಕನ್ನಡ ಜ್ಯೋತಿಯನ್ನು ತಂದು ಕಾರ್ಯಕ್ರಮ ಉದ್ಘಾಟನೆ ಮಾಡಲಾಗುವುದು, ಈ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ರಾಜ್ಯಾಧ್ಯಕ್ಷರಾದ ಪಿ ಕೃಷ್ಣೆಗೌಡರು, ಗಾರಾ ಶ್ರೀನಿವಾಸ್ ಹಾಗೂ ಟಿ.ಕೆ.ಅನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ವೈ.ರಾಘವೇಂದ್ರ ಸಂಸದರು ಶಾಸಕರಾದ ಚನ್ನಬಸಪ್ಪ ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್ ಕಾಂಗ್ರೆಸ್ ಮುಖಂಡರಾದ ಎಮ್ ಶ್ರೀಕಾಂತ್ ಹಾಗೂ ಸೂರ್ಯನರ್ಸಿಂಗ್ ಕಾಲೇಜ್ ಟಿ.ನೇತ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆಯ ರಮೇಶ್, ವಿಶೇಷ ಆಹ್ವಾನಿಕರಾಗಿ ರಘುರಾಜ್ ಮಲ್ನಾಡ್ ಭಾಗವಹಿಸಲಿದ್ದಾರೆ ಹಾಪ್ ಕಾಮ್ಸ್ ಅಧ್ಯಕ್ಷರಾದ ವಿಜಯಕುಮಾರ್ ದನಿ ಹಾಗೂ ರೋಟರಿ ಸೆಂಟ್ರಲ್ ಅಧ್ಯಕ್ಷರಾದ ಕಿರಣ್ ಕುಮಾರ್ ಜಿ. ಕಾರ್ಯಕ್ರಮದಲ್ಲಿ ಸೇವ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಹಾಗೂ ಕನ್ನಡದಲ್ಲಿ ಅತಿ ಹೆಚ್ಚು ಅಂಕವನ್ನು ತೆಗೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
