ಸದಾ ಅನಾಥರ, ದಿಕ್ಕಿಲ್ಲದವರ, ಅಸಹಾಯಕರ, ವಿಕಲ ಚೇತನರ, ವ್ರದ್ದರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನಾಥ ರಕ್ಷಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ನಡೆಸುತ್ತಿರುವ ಡಾ. ನಾಗರಾಜ ನಾಯ್ಕರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಪ್ಪು ಸೇನೆಯು ನೀಡುವ ಪುನೀತ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸದಾ ಕನ್ನಡ ಪರ ಹೋರಾಟಗಳು, ಕನ್ನಡ ಪರ ಚಿಂತನೆಗಳೊಂದಿಗೆ ರಾಜ್ಯದಲ್ಲಿ ಕನ್ನಡ ನಾಡಿನ ರಕ್ಷಣೆಗೆ ಪಣತೊಟ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆರ್. ವಿಜಯ್ ಕುಮಾರ್ ಸಿದ್ದಾಪುರ ರವರು ಸ್ಥಾಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಪ್ಪು ಸೇನೆ ವತಿಯಿಂದ ತಿಪಟೂರು ತಾಲೂಕಿನ ಹೊನ್ನವಳ್ಳಿಯಲ್ಲಿ ರವಿವಾರ ನಡೆದ ಪುನೀತೋತ್ಸವ ಹಾಗೂ ಪುನೀತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ನಾಗರಾಜ ನಾಯ್ಕರಿಗೆ ಪುನೀತಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿಜವಾದ ಪುನೀತ್ ರಾಜಕುಮಾರ್ ಅಭಿಮಾನಿಯಾಗಿ ಹಾಗೂ ಪುನೀತ್ ರಾಜಕುಮಾರ್ ಆಶಯಗಳನ್ನು ಅಳವಡಿಸಿಕೊಂಡು ಪುನೀತ್ ರಾಜಕುಮಾರ್ ರ ಮಾನವೀಯ ಹಾದಿಯಲ್ಲಿ ಅನಾಥರ ದಿಕ್ಕಿಲ್ಲದವರ ಸೇವೆ ನಡೆಸುತ್ತಿರುವ
ಡಾ.ನಾಗರಾಜ ನಾಯ್ಕರಿಗೆ ಈ ಪ್ರಶಸ್ತಿ ನೀಡಿರುವುದು ಯೋಗ್ಯ ವ್ಯಕ್ತಿಗೆ ಪುನೀತ ಶ್ರೀ ಪ್ರಶಸ್ತಿ ನೀಡಿದಂತಾಗಿದೆ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿ ಡಾ. ನಾಗರಾಜ ನಾಯ್ಕರ ಮಾನವೀಯ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಪ್ಪು ಸೇನೆಯ ರಾಜ್ಯಾಧ್ಯಕ್ಷರಾದ ಆರ್ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಏಜಶ್, ಕೆಪಿಸಿಸಿ ಸದಸ್ಯರಾದ ಯೋಗಿಶ್, ಯುವ ಮುಖಂಡ ಶಶಿಕುಮಾರ್, ಸಾಮಾಜಿಕ ಧುರೀಣ ಎಮ್ ಬಿ ಕುಮಾರ್ ನಾಗಮಂಗಲ ಮುಂತಾದವರು ಉಪಸ್ಥಿತರಿದ್ದರು.
