
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವಸಹಾಯ ಸಂಘದಿಂದ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಹಾ ಇವರು ಸಂಸದ ಭವನದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಏಕವಚನದಲ್ಲಿ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ,ಅಂಬೇಡ್ಕರ್ ಅನ್ನೋದೊಂದು ಫ್ಯಾಶನ್ ಆಗಿದೆ. ಅಂಬೇಡ್ಕರ್ ಎನ್ನುವ ಹೆಸರು ಬದಲಿಗೆ ದೇವರ ಹೆಸರು ತೆಗೆದುಕೊಂಡರೆ ಇವರಿಗೆ ಏಳು ಜನ್ಮ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಎಂದು ಹೇಳಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ.
ಈ ತರಹದ ಹೇಳಿಕೆಯನ್ನು ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವಸಹಾಯ ಸಂಘ ಖಂಡಿಸುತ್ತದೆ. ಆದ ಕಾರಣ ಅಮಿತ್ ಶಾ ಅವರ ರಾಜೀನಾಮೆ ಒತ್ತಾಯಿಸಿ ಮಹಿಳಾ ಸಂಘವು ಬೃಹತ್ ಪ್ರತಿಭಟನೆಯನ್ನು ಇಂಡಿಯಾ ಪ್ರವಾಸಿ ಮಂದಿರದಿಂದ ಬಸವೇಶ್ವರ ಸರ್ಕಲ್ ಮುಖಾಂತರ ಡಾ. ಬಿ ಆರ್ ಅಂಬೇಡ್ಕರ್ ಸರ್ಕಲ್ ದ ವರೆಗೆ ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಉಪ ವಿಭಾಗ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆಯಾದ ಭುವನೇಶ್ವರಿ ಕಾಂಬಳೆ, ಇಂದಿರಾ ಗಾಂಧಿ ಹೊಸಮನಿ, ಸವಿತಾ ಹೊಸಮನಿ ಮಹಾದೇವಿ ಶಿವಶರಣ, ಯಲಾಬಾಯಿ ಬನಸೋಡೆ, ಸುನಂದಾ ದಶವಂತ್, ಭಾಗವ್ವ ದಶವಂತ, ನೀಲವ್ವ ದಶವಂತ, ಲಕ್ಷ್ಮಿ ದ್ರಾವಿದ, ರೇಣುಕಾ ದಶವಂತ್, ಪವಿತ್ರ ಮಾದರ್, ಉಪಾಧ್ಯಕ್ಷರಾದ ಸುಶಿಲಾ ಬನಸೋಡೆ, ಕಾರ್ಯದರ್ಶಿಯಾದ ಬೈಜಾಬಾಯಿ ಹರಿಜನ ವಿಕಾಸ್ ಬನಸೋಡೆ, ಆನಂದ್ ಅಗರಖೇಡ ಹಾಗೂ ರಾಜಶೇಖರ್ ಶಿಂಧೆ ಶಿರಗೂರ ಇವರ ನೇತೃತ್ವದಲ್ಲಿ ಸುಮಾರು 150 ಕ್ಕೂ ಹೆಚ್ಚು ಮಹಿಳೆಯರು ಸೇರಿಕೊಂಡು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ವರದಿ ಮನೋಜ್ ನಿಂಬಾಳ
