ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಗ್ರಾಮದ ದಲಿತ ಕೇರಿಯಲ್ಲಿ ನೀರಿನ ಸಮಸ್ಯೆಯಿಂದಾಗಿ ನಿನ್ನೆ (25-12-2024)ರಂದು ಕರುನಾಡ ಕಂದ.ಕಾಮ್ ನಲ್ಲಿ ಪ್ರಕಟವಾದ ವರದಿಯ ಫಲಶ್ರುತಿಯಾಗಿ ಇಂದು ಕಾನಾಮಡುಗು ಗ್ರಾಮಕ್ಕೆ ಕೂಡ್ಲಿಗಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಸದಸ್ಯರಗಳು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸಿದರು.
ಇನ್ನೂ ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆ ಹರಿಯಬೇಕು ಹಾಗೂ ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಸರ್ಕಲ್ ನಲ್ಲಿ ವಾಲಿರುವ ವಿದ್ಯುತ್ ಕಂಬವನ್ನು ಸರಿಪಡಿಸಲು ತಾಲೂಕು ಕೆಇಬಿ ಅಧಿಕಾರಿಗಳಿಗೆ ಸೂಚಿಸಿ, ಚರಂಡಿ ವ್ಯವಸ್ಥೆ ಕುರಿತು ಅಂದಾಜು ಪಟ್ಟಿ ತಯಾರು ಮಾಡಲು ತಮ್ಮ ಅಧೀನ ಅಧಿಕಾರಿಗಳಿಗೆ ಕೂಡ್ಲಿಗಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣೆ ಅಧಿಕಾರಿಯಾದ ನರಸಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಮಾದೇವಿ ಅಂಜಿನಪ್ಪ, ಕಾನ ಮಡುಗು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ ದಿನೇಶ್,
ಬಿ ಅಂಜನಪ್ಪ, ಮಂಜುನಾಥ್, ಬೋರಪ್ಪ,ಗಂಗಮ್ಮ ಶರಣಪ್ಪ, ಮಹಾದೇವಿ ಹನುಮಂತಪ್ಪ, ಆಲೂರು ಗ್ರಾಮ ಪಂಚಾಯತಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ವಿನಯ್ ಕುಮಾರ್, ಮಂಜುನಾಥ ಎಂ ಟಿ, ಗ್ರಾಮ ಪಂಚಾಯತಿ ಸಿಬ್ಬಂದಿ, ದಲಿತ ಕೇರಿಯ ಮುಖಂಡರಾದ ಹೆಚ್. ದುರ್ಗಪ್ಪ, ಎನ್ ಫಕೀರಪ್ಪ, ಅಜ್ಜಪ್ಪ.ಮೈಲಾರಪ್ಪ, ಮಡಿವಾಳಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ- ಗುರುರಾಜ್ ಎಲ್, ಕಲ್ಲಹಳ್ಳಿ ಟಿ
