ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಎಲ್ಲಾ ಛಲವಾದಿ ಸಮುದಾಯದ ಅಧಿಕಾರಿ,ನೌಕರರಲ್ಲಿ ಜೈ ಭೀಮ ವಂದನೆಗಳೊಂದಿಗೆ ವಿನಮ್ರವಾಗಿ ಬೇಡಿಕೊಳ್ಳುವದೆನಂದರೆ, ಸರಕಾರಿ ನೌಕರರ ಸಹಕಾರಿ ಬ್ಯಾಂಕ (G.O.C.C.)ನಿ, ವಿಜಯಪುರ ಆಡಳಿತ ಮಂಡಳಿ – 2025 ಚುನಾವಣೆಯಲ್ಲಿ “ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ” ಸ್ಥಾನಕ್ಕೆ ನಮ್ಮ “ಛಲವಾದಿ” ಸಮುದಾಯದ ಶ್ರೀ ಉಮೇಶ ಶಿಂಗೆ ಪೊಲೀಸ್ ಇಲಾಖೆ, ವಿಜಯಪುರ ಸ್ಪರ್ಧಿಸಿದ್ದು , ನಮ್ಮ ಸಂಘದ ಪದಾಧಿಕಾರಿಗಳು,ಹಿರಿಯ ಅಧಿಕಾರಿಗಳು,ನೌಕರರು ಒಗ್ಗಟ್ಟಾಗಿ ಸಮುದಾಯದ ಅಭ್ಯರ್ಥಿ ನಿರ್ದೇಶಕರಾಗಿ ಆಯ್ಕೆ ಮಾಡಲು ನಿರ್ಧರಿಸಿರುವದರಿಂದ, ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಗಳ “ಛಲವಾದಿ” ಸಮುದಾಯದ ಅಧಿಕಾರಿಗಳು, ನೌಕರರು ತಮ್ಮ ಅತ್ಯಮೂಲ್ಯವಾದ ಮತವನ್ನು ನಮ್ಮ ಸಮುದಾಯದ ಅಭ್ಯರ್ಥಿ ಶ್ರೀ ಉಮೇಶ ಶಿಂಗೆ ಇವರಿಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಿ ಸರಕಾರಿ ನೌಕರರ ಸಹಕಾರಿ ಬ್ಯಾಂಕ (G.O.C.C.) ನಿ, ವಿಜಯಪುರದಲ್ಲಿ ನಮ್ಮ ಛಲವಾದಿ ಸಮುದಾಯದ ನಿರ್ದೇಶಕರು ಸೇವೆ ಸಲ್ಲಿಸುವ ಸುವರ್ಣಾವಕಾಶ ಮಾಡಿಕೊಡಬೇಕು. ಅದಕ್ಕಾಗಿ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಗಳ ಛಲವಾದಿ ಸಮುದಾಯದ ನೌಕರರು ರವಿವಾರ 05-01-2025 ರಂದು ಶ್ರೀ ಉಮೇಶ ಶಿಂಗೆ ಇವರಿಗೆ ಮತದಾನ ಮಾಡಲು ತಮ್ಮಲ್ಲಿ ಕಳಕಳಿ ವಿನಂತಿ ಎಂದು
ಶ್ರೀ ಚಿದಾನಂದ, ಎಮ್. ಕಾಂಬಳೆ ರಾಜ್ಯಾಧ್ಯಕ್ಷರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
