ಕಲಬುರಗಿ: ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಕಲಬುರಗಿಯವರು ಸಾರ್ವಜನಿಕರ ದೂರುಗಳು ಮತ್ತು ನಮ್ಮ ಧ್ವನಿಗೆ ಓಗೊಟ್ಟು, ಜೆಸ್ಕಾಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಹಲವಾರು ತೋಟದ ಮನೆಗಳಿಗೆ, ಜಮೀನಿನಲ್ಲಿ ಹಾಗೂ ದೂರ ದೂರದಲ್ಲಿ ನಿರ್ಮಿಸಿರುವ ದೊಡ್ಡಿ ಮನೆಗಳಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಸರಬರಾಜು ಇಲ್ಲದಿರುವುದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಜೆಸ್ಕಾಂ ಕಲಬುರಗಿ ರವರಿಗೆ ತೋಟದ ಮನೆ,ಗದ್ದೆಗಳಲ್ಲಿ,ದೊಡ್ಡಿಗಳಲ್ಲಿ ವಾಸಿಸುತ್ತಿರುವ ಹಲವಾರು ಜನರ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಕಾರ್ಯ ನಿರ್ವಾಹಕ ಅಭಿಯಂತರರು, ಕಾರ್ಯ ಮತ್ತು ಪಾಲನೆ, ವಿಭಾಗ ರವರುಗಳು ಕೂಡಲೇ ಕಾರ್ಯತತ್ಪರರಾಗಿ ಸಮೀಪದಲ್ಲಿರುವ ವಿದ್ಯುತ್ ಉಪ ಕೇಂದ್ರಗಳು ಹಾಗೂ ಫೀಡರ್ ಗಳಿಂದ ಹಗಲಿನ ವೇಳೆಯಲ್ಲಿ 7 ತಾಸಿನ 3 ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿರುವ ಐ.ಪಿ. ಸೆಟ್ ಫೀಡರಗಳಿಗೆ ರೋಸ್ಟರ್ GOS ಅಳವಡಿಸುವ ಹಾಗೂ ಸಾಧ್ಯವಾದಲ್ಲಿ ಸಮೀಪದಲ್ಲಿರುವ ನಿರಂತರ ಜ್ಯೋತಿ ಫೀಡರಗಳಿಂದ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಂಡು ರಾತ್ರಿ ವೇಳೆಯಲ್ಲಿ ಕೂಡ Single Phase / Open Delta system od Single Phase ವಿದ್ಯುಚ್ಛಕ್ತಿ ಸರಬರಾಜು ಮಾಡುವಂತೆ ಸೂಕ್ತ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಶೀಘ್ರವಾಗಿ ಆಡಳಿತ ಕಛೇರಿಗೆ ಸಲ್ಲಿಸಲು ಕೋರಲಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ವಿಷಯವನ್ನು ಅತ್ಯಂತ ಜರೂರೆಂದು ಪರಿಗಣಿಸಲು ಸೂಚಿಸಲಾಗಿದೆ.
ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಕಲಬುರಗಿಯವರು ನಮ್ಮ ಸಮಸ್ಯೆಗಳನ್ನು ಆಲಿಸಿ ರೈತರಿಗೆ ಹಾಗೂ ಇನ್ನೂಳಿದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದೆಂದು ಅನುಮೋದಿಸಿದ್ದು ಒಳ್ಳೆಯ ಸತ್ಕಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೆಲೋಗಿ ಹೋಬಳಿ ಘಟಕದ ಅಧ್ಯಕ್ಷರಾದ ಶರಣಗೌಡ ಪಾಟೀಲ್ ದಳಪತಿ ಗುಡೂರ SN ರವರು ಮತ್ತು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.
ವರದಿ: ಚಂದ್ರಶೇಖರ ಪಾಟೀಲ್ (ಜೇವರ್ಗಿ)
