ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕುರನಳ್ಳಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣ ಹಾಳಾಗಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಮೌನ ನಿದ್ರೆಯಲ್ಲಿ ಜಾರಿದ್ದಾರೆ.
ಪ್ರತಿನಿತ್ಯ ನೂರಾರು ಜನರು ಬಸ್ ನಿಲ್ದಾಣದಲ್ಲಿ ವಿಶ್ರಾಂತಿಗಾಗಿ ಮತ್ತು ಬಸ್ಸಿಗಾಗಿ ಕಾಯುತ್ತಾ ಕುಳಿತಿರುತ್ತಾರೆ, ಒಂದು ವೇಳೆ ಸಾರ್ವಜನಿಕರ ಮೇಲೆ ಕುಸಿಯುತ್ತಿರುವ ಮೇಲ್ಚಾವಣಿಯು ಅವರ ಮೇಲೆ ಬಿದ್ದು ಜೀವಕ್ಕೆ ಅಪಾಯವಾದರೆ ಇದಕ್ಕೆ ಯಾರು ಹೊಣೆ ಎಂದು ಯುವ ಮುಖಂಡ ಬಸವರಾಜ ಹಳಿಮನಿ ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಚಂದ್ರಶೇಖರ ಪಾಟೀಲ್ ( ಗುಡೂರ ಎಸ್. ಎನ್ )
