ಯಾದಗಿರಿ/ ಶಹಾಪೂರ : ನಗರದ ವಿಶ್ವಜ್ಯೋತಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಜಯ ಗುರುದೇವ ಮಹಾಸ್ವಾಮಿಗಳು ಜ್ಞಾನಯೋಗ ಮಂದಿರ ಗೋಗಿ ವಹಿಸಿ ಮಕ್ಕಳು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ನಿಮ್ಮ ಜೀವನ ಅಮೂಲ್ಯವಾದದ್ದು ಅರಿತು ನಡೆಯಿರಿ ಎಂದು ಸಲಹೆ ನೀಡಿದರು ಉದ್ಘಾಟನೆಯನ್ನು ಶ್ರೀಮತಿ ರೇಣುಕಾ ಪಾಟೀಲ್ ಕ್ಷೇತ್ರ ಸಮನ್ವಯ ಅಧಿಕಾರಿಗಳು ವಹಿಸಿ ಇಂದಿನ ಯುವಕರು ನಾಳಿನ ನಾಯಕರು ನೀವು ನಿಮ್ಮ ಗುರಿಯನ್ನು ಇಟ್ಟುಕೊಂಡು ಅಭ್ಯಾಸ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದ ಉ.ಕ.ಕ ಅಧ್ಯಕ್ಷರಾದ ಡಾ. ಶರಣು ಬಿ ಗದ್ದುಗೆ ಅವರು ಕನ್ನಡ ನಾಡು ನುಡಿಯ ಕುರಿತು ಯುವಕರಲ್ಲಿ ಕನ್ನಡದ ಪ್ರೇಮವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು ವಿಶೇಷ ಉಪನ್ಯಾಸ ನೀಡಿ ಕಾರ್ಯಕ್ರಮದ ಅಥಿತಿ ಸ್ಥಾನ ಅಲಂಕರಿಸಿ ಮಾತನಾಡಿದ ಕನ್ನಡ ಉಪನ್ಯಾಸಕರಾದ ಶ್ರೀ ಮುನಿಯಪ್ಪ ನಾಗೋಲಿ ಅವರು ಮಕ್ಕಳು ಕಲಿಕೆಯಲ್ಲಿ ತಲ್ಲಿನರಾಗದೆ ಮಾಯಾಲೋಕದ ಭ್ರಮೆಯಲ್ಲಿ ಬದುಕುತ್ತಿದ್ದು ಯುವಕರು ತನ್ನ ಶಿಕ್ಷಣದಡೆಗೆ ತಮ್ಮ ಗಮನಹರಿಸಿ ನಿಮ್ಮ ಅಮೂಲ್ಯವಾದ ಜೀವನವನ್ನು ರೂಪಿಸಿಕೊಳ್ಳಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಬ್ರಹ್ಮಕುಮಾರಿಯ ಉಷಾಕ್ಕಾ ಅವರು ವಹಿಸಿ ಜೀವನ ಕೇವಲ ಶಿಕ್ಷಣ ಮುಗಿಸಿ ಉದ್ಯೋಗ ಮಾಡುವುದು ಅಷ್ಟೇ ಅಲ್ಲ ಜೀವನದಲ್ಲಿ ಪರೋಪಕಾರವು ಬಹಳ ಮುಖ್ಯ ನಾಲ್ಕು ಜನರಿಗೆ ಸಹಾಯ ಮಾಡಿದರೆ ಸಾಕು ಎಂದರು. ನಿಮ್ಮ ಜೀವನದಲ್ಲಿ ಹೊಸದಾದ ಜೀವನಶೈಲಿ ರೂಪಿಸಿಕೊಳ್ಳಲು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜಶೇಖರ್ ಬಿ ಡಿಗ್ಗಿ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಏನೇ ಕಷ್ಟಗಳು ಬಂದರೆ ಅಂತಹ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತಿಳಿಸಿದರು. ಪ್ರಾಂಶುಪಾಲರಾದ ಶ್ರೀಮತಿ ತಬಿತಾ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಜಕುಮಾರ,ನರಸಪ್ಪ,ಶಿವರಾಜ ಮತ್ತು ವೀರಭದ್ರಪ್ಪ ರವರು ವಹಿಸಿದ್ದರು ಕಾರ್ಯಕ್ರಮವನ್ನು ಶಿವಾನಂದ ನಿರೂಪಿಸಿದರು ಮಾಳಪ್ಪ ಕುನ್ನೂರ ಸ್ವಾಗತಿಸಿದರು ಬಸವರಾಜ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
