
ರಾಯಚೂರು/ಮಾನ್ವಿ: ಮಾನ್ವಿ ಪುರಸಭೆಯಿಂದ ತ್ಯಾಜ್ಯ ವಿಲೇವಾರಿಗಾಗಿ ಮೂರು ಟ್ಯಾಕ್ಟರ್ ಗಳು ಬಿಡುಗಡೆ, ಸ್ವಚ್ಛ ಮತ್ತು ಸುಂದರ ಪಟ್ಟಣಕ್ಕಾಗಿ ಕೈ ಜೋಡಿಸಿದ ಸಚಿವ ಎನ್ ಎಸ್ ಬೋಸರಾಜ್.

ಪುರಸಭೆ ಕಾರ್ಯಾಲಯದಲ್ಲಿ ಸ್ವಚ್ಛ ಮತ್ತು ಸುಂದರ ಪಟ್ಟಣಕ್ಕಾಗಿ ಪುರಸಭೆಯ 15ನೇ ಹಣಕಾಸಿನ ಯೋಜನೆ ಯೋಜನೆಯಡಿ ಪಟ್ಟಣದಾದ್ಯಂತ ತ್ಯಾಜ್ಯ ವಿಲೆವಾರಿಗಾಗಿ 30 ಲಕ್ಷ ರೂಪಾಯಿಗಳ ಮೂರು ಟ್ಯಾಕ್ಟರ್ ಗಳಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜ್ ಅವರು ಹಸಿರು ನಿಶಾನೆ ತೋರುವ ಮೂಲಕ ನೂತನ ಮೂರು ಟ್ರ್ಯಾಕ್ಟರ್ ಗಳಿಗೆ ಚಾಲನೆ ನೀಡಿದರು.
ಪಟ್ಟಣದ ಸಂಪೂರ್ಣ ಸ್ವಚ್ಛತೆಗಾಗಿ ಪುರಸಭೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿ ಸ್ವಚ್ಛ ಮತ್ತು ಸುಂದರ ನಗರಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ ಪಟ್ಟಣದಾದ್ಯಂತ ತ್ಯಾಜ್ಯ ವಿಲೇವಾರಿಗಾಗಿ ಮೂರು ಟ್ಯಾಕ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ ಸಾರ್ವಜನಿಕರು ಕಸ ವಿಲೇವಾರಿಗಾಗಿ ವಾಹನಗಳನ್ನು ಉಪಯೋಗ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
ವರದಿ ಪಂಪಾಪತಿ ನಾಯಕ
