ಬೆಂಗಳೂರು: ಎಸ್ ಕೆ ಎಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ವತಿಯಿಂದ ಶ್ರೀ ಪದ್ಮಾವತಿ ಕಲ್ಯಾಣ ಮಂಟಪ ಮಾದನಾಯಕನಹಳ್ಳಿ, ಬೆಂಗಳೂರಿನಲ್ಲಿ ದಿನಾಂಕ 5.01.2025 ರಂದು 2ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಡೆಯಿತು.
ಇದರಲ್ಲಿ ಬ್ಲೂ ಡ್ರಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ವತಿಯಿಂದ 8 ವಿದ್ಯಾರ್ಥಿಗಳು ಭಾಗವಹಿಸಿದ್ದು ಕಟಾ ಮತ್ತು ಕುಮಿತೆಯಲ್ಲಿ ಎರಡು ಬಂಗಾರದ ಪದಕ ಮೂರು ಬೆಳ್ಳಿ ಪದಕ 11 ಕಂಚಿನ ಪದಕ ತಂದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ತರಬೇತುದಾರ ಷಣ್ಮುಖಪ್ಪನವರು ತಿಳಿಸಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕರಾದ ಮೋಹನ್ ಕುಮಾರ್ ಸಂಸ್ಥೆಯ ಪದಾಧಿಕಾರಿಗಳು ಪಾಲಕರು ಅಭಿನಂದನೆಯನ್ನು ತಿಳಿಸಿದ್ದಾರೆ.
ವಿಜೇತರ ವಿವರ:
ಪ್ರೀತಮ್ ತಂದೆ ಪ್ರವೀಣ್ ಕುಮಾರ್ ಚಳ್ಳಮರದ ಕಾಟಾದಲ್ಲಿ ತೃತೀಯ ಸ್ಥಾನ ಕೋಮಿತೆಯಲ್ಲಿ ತೃತೀಯ ಸ್ಥಾನ, ವಿರಾಟ್ ತಂದೆ ಸುರೇಶ್ ಡಣಾಪುರ ಕಾಟಾದಲ್ಲಿ ದ್ವಿತೀಯ ಸ್ಥಾನ ಕುಮಿತೆಯಲ್ಲಿ ತೃತೀಯ ಸ್ಥಾನ, ಆಯುದ್ ತಂದೆ ಕಾಸಿಂಸಾಬ್ ಕಾಟಾದಲ್ಲಿ ತೃತೀಯ ಸ್ಥಾನ ಕುಮಿತೆಯಲ್ಲಿ ದ್ವಿತೀಯ ಸ್ಥಾನ, ನೈತಿಕ್ ತಂದೆ ವಂಶಿಕೃಷ್ಣ ಕಟದಲ್ಲಿ ತೃತೀಯ ಸ್ಥಾನ ಕುಮಿತೆಯಲ್ಲಿ ಪ್ರಥಮ ಸ್ಥಾನ, ರಾಘವೇಂದ್ರ ತಂದೆ ಗೋಪಾಲಕೃಷ್ಣ ಕಟದಲ್ಲಿ ತೃತೀಯ ಸ್ಥಾನ ಕುಮಿತೆಯಲ್ಲಿ ತೃತೀಯ ಸ್ಥಾನ, ವೆಂಕಟೇಶ್ ತಂದೆ ಶ್ರೀನಿವಾಸ್ ಕಾಟಾದಲ್ಲಿ ತೃತೀಯ ಸ್ಥಾನ ಕುಮತೆಯಲ್ಲಿ ದ್ವಿತೀಯ ಸ್ಥಾನ, MD ಉಮಾರ್ ತಂದೆ MD ರಫೀಕ್ ಕಾಟಾದಲ್ಲಿ ತೃತೀಯ ಸ್ಥಾನ ಕುಮತೆಯಲ್ಲಿ ತೃತೀಯ ಸ್ಥಾನ, ವರುಣ್ ತಂದೆ ಎಂ,ಕೆ ರಾಮು ಕಟದಲ್ಲಿ ತೃತೀಯ ಸ್ಥಾನ ಕುಮುತಿಯಲ್ಲಿ ಪ್ರಥಮ ಸ್ಥಾನ, ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
