ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಾಸನಬದ್ಧ ಸೌಲಭ್ಯಗಳಿಗೆ ಆಗ್ರಹಿಸಿ ಚಿತ್ತಾಪುರ ತಾಲೂಕ ಮಟ್ಟದ ಸಮಾವೇಶ, ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ/ ಚಿತ್ತಾಪುರ: ಹಾಸ್ಟೆಲ್‌ ಕಾರ್ಮಿಕರಿಗೆ ಜೀವನ ಯೋಗ್ಯ ವೇತನ, ಸೇವಾ ಭದ್ರತೆ, ಶಾಸನಬದ್ದ ಸೌಲಭ್ಯಗಳಿಗೆ ಆಗ್ರಹಿಸಿ, ಹಾಸ್ಟೆಲ್‌ ಹೊರಗುತ್ತಿಗೆ ಕಾರ್ಮಿಕರ ಚಿತ್ತಾಪುರ ತಾಲೂಕ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಸತಿ ನಿಲಯ ಕಾರ್ಮಿಕರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಘವೇಂದ್ರ ಎಮ್. ಹೇಳಿದರು.
ಪಟ್ಟಣದ ಕಾಶಿ ಬಡಾವಣೆಯ ಗಣೇಶ್‌ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಎಐಯುಟಿಯುಸಿ ಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಚಿತ್ತಾಪುರ ತಾಲೂಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ದೇಶದಲ್ಲಿ ಖಾಯಂ ಸ್ವರೂಪದ ಉದ್ಯೋಗಗಳೆ ನಾಶವಾಗುತ್ತಿವೆ, ಎಲ್ಲಾ ಹುದ್ದೆಗಳಿಗೆ ಹೊರಗುತ್ತಿಗೆ, ಒಳ ಗುತ್ತಿಗೆ ಹೆಸರಿನಲ್ಲಿ ನೇಮಕ ಮಾಡಿಕೊಂಡು ಕಡಿಮೆ ಸಂಭಳ ನೀಡಿ ಶೋಷಿಸಲಾಗುತ್ತಿದೆ. ಇದಕ್ಕೆಲ್ಲಾ ಜಾಗತೀಕರಣ, ಉದಾರಿಕರಣಗಳೇ ಮೂಲ ಕಾರಣ ಎಂದು ಹೇಳಿದರು.
ಕಾರ್ಮಿಕರು ವೈಚಾರಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಬೆಳೆಯದಿರುವುದೇ ದುಡಿಯುವ ಜನಗಳ ಇಂದಿನ ಸಮಸ್ಯೆಗೆ ಕಾರಣವಾಗಿದೆ, ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟವನ್ನು ಕಟ್ಟಬೇಕು, ಕಾರ್ಮಿಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಾದ ವೇತನ ಕಡಿತ, ಇಎಸ್ಐ, ಈಪಿಎಫ್, ಹಣ ಕಡಿತ, ಕನಿಷ್ಠ ವೇತನ 35,950ರೂ ನಿಗದಿ ಮಾಡಬೇಕು, ಶಾಸನಬದ್ದ ಸೌಲಭ್ಯಗಳು ಒದಗಿಸಬೇಕು, ಜೀತ ಪದ್ಧತಿಯಂತೆ ವರ್ಷಾನುಗಟ್ಟಲೆ ದುಡಿಯುತ್ತಿರುವ ಹಾಸ್ಟೆಲ್‌ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣು ಹೇರೂರು ಮಾತನಾಡಿ, ರಾಜಕೀಯ ಮಂತ್ರಿಗಳು, ಶಾಸಕರು, ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳಲು ಹಾತೊರೆಯುತ್ತಾರೆಯೇ ಹೊರತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಸಮಸ್ಯೆಗಳನ್ನು ಯಾವುದೇ ರಾಜಕೀಯ ಪಕ್ಷಗಳು ಗಮನಹರಿಸದೆ ಇರೋದು ವಿಪರ್ಯಾಸ. ಆದ್ದರಿಂದ ಕಾರ್ಮಿಕರೇ ಬೀದಿಗಿಳಿದು ನಮ್ಮ ಹಕ್ಕಿಗಾಗಿ ಹೋರಾಟವನ್ನು ಕಟ್ಟಬೇಕು ಎಂದು ಕರೆ ನೀಡಿದರು.
ಸಂತೋಷ ದೊಡ್ಡಮನಿ ನಿರೂಪಿಸಿದರು. ಶರಣಮ್ಮ ಕಟ್ಟಿಮನಿ ವಂದಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ:

ಸಂತೋಷ ದೊಡ್ಡಮನಿ (ಅಧ್ಯಕ್ಷರು), ಇಸಮ್ಮ ನಾಲವಾರ, ವಿಜಯಲಕ್ಷ್ಮಿ ಕಾಶಿ, ಸದಾನಂದ ಧನ್ನೆಕರ್, ಮಲ್ಲಮ್ಮ ಚಿತ್ತಾಪುರ (ಉಪಾಧ್ಯಕ್ಷರು), ಶರಣಮ್ಮ ಕಟ್ಟಿಮನಿ (ಕಾರ್ಯದರ್ಶಿ), ರಾಜು ಒಡೆಯರ್ (ಜಂಟಿ ಕಾರ್ಯದರ್ಶಿ), ತೋಫಿಕ್ ಕೋರವಾರ, ಮಾರುತಿ ಶಹಾಬಾದ್, ಲತಾ ಶ್ರೀನಿವಾಸ್, ಬಸವರಾಜ್ ನಾಟೆಕಾರ್, ಜಗ್ಗು ಉಂಡಿ, ಈರಮ್ಮ ಮಲ್ಲಿಕಾರ್ಜುನ, ಹಿರಗಪ್ಪ ಕರಣಿಕ್, ನಂದ ಅಶೋಕ್, ಮೀನಾಕ್ಷಿ, ಶಾಲಿನಿ ಇತರರು ಇದ್ದರು.

ವರದಿ ಮೊಹಮ್ಮದ್ ಅಲಿ ಚಿತ್ತಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ