
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕರಡಿ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಕೆ ಆರ್ ದೇವರಾಜು ಬಣವು ಅಭೂತಪೂರ್ವವಾಗಿ ಗೆಲುವು ಸಾಧಿಸಿದೆ.
ಗೆಲುವಿನ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಕೆ ಆರ್ ದೇವರಾಜು ತಾಲೂಕು ಮಟ್ಟದ ಹಲವಾರು ರಾಜಕಾರಣಿಗಳು ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಕೊಂಡು ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಹೋರಿಸಿದರು ಕೂಡಾ ನಮ್ಮ ಭಾಗದ ರೈತರು ನಮ್ಮ ತಂಡದ ಮೇಲೆ ಹಾಗೂ ನನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ನನಗೆ ಮತ್ತೊಮ್ಮೆ ಆಶೀರ್ವದಿಸಿರುವುದಕ್ಕಾಗಿ ನಾನು ನಮ್ಮ ರೈತ ಬಾಂಧವರಿಗೆ ಕೃತಜ್ಞನಾಗಿರುತ್ತೇನೆ ಎಂದು ಹಾಗೂ ಇನ್ನೂ ಉತ್ತಮ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಕೆ ಆರ್ ದೇವರಾಜು 295, ಉಪ್ಪಿನ ಹಳ್ಳಿ ಜಯಣ್ಣ 246, ದೊಡ್ಡ ಲಿಂಗಯ್ಯ 245, ಶಿವಮೂರ್ತಿ 243, ಶೇಷಣ್ಣ 228, ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮೃತಶ್ರೀ 281, ಭಾರತಿ 248, ಪರಿಶಿಷ್ಟ ಜಾತಿ ಮೀಸಲಿನಿಂದ ಮಲ್ಲೇಶಯ್ಯ 263, ಪರಿಶಿಷ್ಟ ಪಂಗಡದಿಂದ ಕೃಷ್ಣಯ್ಯ 267, ಹಿಂದುಳಿದ ವರ್ಗದಿಂದ ಬಸವರಾಜು ಕೆ 265, ವೀರಣ್ಣ ಎನ್ಎಸ್255 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ
ಇನ್ನು ಉಳಿದಂತೆ ಬೇರೆ ಪಕ್ಷದ ಗುಂಪಿನಿಂದ ಸ್ಪರ್ಧಿಸಿದ್ದ ಈಶ್ವರಯ್ಯ ಕೆ ಎಸ್ 78, ಚಿದಾನಂದ ಸ್ವಾಮಿ 72, ಶಿವಪುತ್ರ 83, ರಮೇಶ್ 87, ಪಂಚಾಕ್ಷರಯ್ಯ 90, ಮಹಿಳಾ ಮೀಸಲಾ ಕ್ಷೇತ್ರದಿಂದ ಪದ್ಮಾವತಿ 80, ಪಾರ್ವತಮ್ಮ 92, ಪರಿಶಿಷ್ಟ ಜಾತಿ ಮೀಸಲಿನಿಂದ ಹೊನ್ನಪ್ಪ 87, ಪರಿಶಿಷ್ಟ ಪಂಗಡ ಮೀಸಲಿನಿಂದ ಮಂಜುನಾಥ್ 100, ಹಿಂದುಳಿದ ವರ್ಗದಿಂದ ಹಾಗೂ ಷಡಕ್ಷರಿ 101 ಮತಗಳನ್ನು ಪಡೆದು ಪ್ರಭಾವಗೊಂಡರು
ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಶ್ರೀ ರಂಗನಾಥ್ ಕರ್ತವ್ಯ ನಿರ್ವಹಿಸಿದರು.
