
ಚಾಮರಾಜನಗರ: ಕರ್ನಾಟಕ ಕಾವಲು ಪಡೆಯವತಿಯಿಂದ ದಿನಾಂಕ 07/01/2025 ರಂದು ರಾಜ್ಯ ಸರ್ಕಾರವು ಸಾರಿಗೆ ಬಸ್ ದರವನ್ನು ಶೇ 15% ಏರಿಸಿರುವುದನ್ನು ಖಂಡಿಸಿ ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಮುಖಾಂತರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಪೂಜೆ ಮಾಡಿ ಕೆಲ ಕಾಲ ರಸ್ತೆ ತಡೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ ಸರ್ಕಾರವು ಬಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿದರು ಇದೇ ವೇಳೆ ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ್ ಸಾಹಿತಿ ಕಾಳಿಂಗಸ್ವಾಮಿ ಮಾತನಾಡಿದರು.
ಕಾವಲು ಪಡೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಅಬ್ದುಲ್ ರಷೀದ್, ತಾಲ್ಲೂಕು ಕಾರ್ಯದರ್ಶಿಗಳಾದ ಎಸ್.ಮುಬಾರಕ್,ತಾಲ್ಲೂಕು ಗೌರವಾಧ್ಯಕ್ಷರಾದ ರಾಮೇಗೌಡ,ತಾಲ್ಲೂಕು ಉಪಾಧ್ಯಕ್ಷರಾದ ಮಂದುನಾಥ್,ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷಾ, ಟೌನ್ ಗೌರವಾಧ್ಯಕ್ಷರಾದ ಶಕೀಲ್,ತೆರಕಣಾಂಬಿ ಘಟಕದ ಅಧ್ಯಕ್ಷರಾದ ಮಹದೇವು, ಟೌನ್ ಸಂಚಾಲಕರಾದ ಮಿಮಿಕ್ರಿರಾಜು, ರವಿಕುಮಾರ್,ಮುಂಟೀಪುರ ಮಾದಯ್ಯ, ಜಾಹೀರ್ ಹುಸೇನ್,ರಾಚಪ್ಪನಾಯ್ಕ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್
