ಶಿವಮೊಗ್ಗ : ಆತ್ಮರಕ್ಷಣೆಗಾಗಿ ಕರಾಟೆ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಜೀವನದಿಂದಲೇ ಕಲಿಯುವ ಪ್ರಯತ್ನ ಮಾಡಿದರೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಶಾಸಕರಾದಂತಹ ಎಸ್ಎನ್ ಚನ್ನಬಸಪ್ಪನವರು ಹೇಳಿದರು.
ಆಯೋಜನೆಯನ್ನು ಮಾಡಿದ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ್ ನ ಹಾಗೂ ಪಂದ್ಯಾವಳಿಯ ಸಂಚಾಲಕರಾದಂತಹ ಸನ್ ಸೈ ಸಾಧಿಕ , ಸನ್ ಸೈ ನವೀನ್ ಮತ್ತು ಸನ್ ಸೈ ಮಂಜುನಾಥ್ ಹಾಗೂ ಅವರ ತಂಡದವರು ಎರಡನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಶಿವಮೊಗ್ಗ ಜಿಲ್ಲೆಯ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 5 ಜನವರಿ 2025 ರಂದು ಆಯೋಜಿಸಲಾಗಿತ್ತು. ಕರಾಟೆ ಕಲಿಯುವ ಮೂಲಕ ಆತ್ಮ ರಕ್ಷಣೆ ಮಾತ್ರವಲ್ಲದೆ ರಾಷ್ಟ್ರ ಸಂರಕ್ಷಣೆಗೂ ಮುಂದಾಗಬೇಕು ಎಂದರು.
ಈ ಪಂದ್ಯಾವಳಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾಕ್ಟರ್ ಧನಂಜಯ್ ಮಾತನಾಡಿ ಕರಾಟೆಯಲ್ಲಿ ಮೊದಲು ಮಕ್ಕಳು ಕಲಿಯುವುದೇ ಶಿಸ್ತು ಸ್ವಯಂ ನಿಯಂತ್ರಣ ದೈಹಿಕ ಚಟುವಟಿಕೆ ಆತ್ಮ ವಿಶ್ವಾಸ ಧೈರ್ಯ ಹೆಚ್ಚುತ್ತದೆ. ಏಕಾಗ್ರತೆ ಇದು ಪೂರಕವಾಗಿದೆ ಕರಾಟೆ ಆಗಿದೆ ಎಂಬ ಪ್ರಶ್ನೆ ಉದ್ಭವಿಸಬಹುದು, ಆದರೆ ಇದು ಹೋರಾಟ ಮಾತ್ರವಲ್ಲ ಸ್ವಯಂ ಶೃಷ್ಟಿಗೂ ಸಹಕಾರಿಯಾಗಿದೆ ಕ್ರೀಡಾಕೂಟದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು ಹೊರ ರಾಜ್ಯಗಳಾದ ತಮಿಳುನಾಡು , ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ನಮ್ಮ ರಾಜ್ಯ ದಿಂದ ಸುಮಾರು 800 – 1000 ಕರಾಟೆ ಕ್ರೀಡಾಪಟುಗಳು ಪಾಲ್ಗೊಂಡಿರುವುದು ಸ್ವಾಗತ ಎಂದರು. ಹಾಗೂ ಈ ಶ್ರೀಯುತ ಹೆಚ್, ಎಸ್ ಸುಂದರೇಶ್ ಅಧ್ಯಕ್ಷರು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ, ಶ್ರೀಯುತ ಕಲಗೂಡು ರತ್ನಾಕರ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಮಾಲತೇಶ್ , ನ್ಯೂಸ್ ವಾರಿಯರ್ಸ್ ಸಂಪಾದಕರದಂತಹ ರಘುರಾಜ್ , ಪಂದ್ಯಾವಳಿಯಲ್ಲಿ ವಿವಿಧ ಗಣ್ಯರು ಹಾಗೂ ರಾಷ್ಟ್ರದ 50ಕ್ಕೂ ಹೆಚ್ಚು ತೀರ್ಪುಗಾರರು ಪಾಲ್ಗೊಂಡಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
