ಬೆಂಗಳೂರು : ಇದೇ ತಿಂಗಳ 11-1-2025 ಎರಡನೆಯ ಶನಿವಾರ ಬೆಳಿಗ್ಗೆ 10 ಘಂಟೆಯಿ0ದ ಬೆಂಗಳೂರಿನ ಆನಂದ ರಾವ ವೃತ್ತದ ಬಳಿಯಿರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಈ ಕೆಳಗಿನ ಕಾರ್ಯಕ್ರಮ ಏರ್ಪಡಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ,ಆಪ್ತ ಸಲಹೆಗಾರ, ವಕೀಲರ ವಾಹಿನಿ ಪತ್ರಿಕೆಯ ಸಂಪಾದಕ, ಲೇಖಕ ಡಾ. ಡಿ ಎಂ ಹೆಗಡೆ ಯವರಿಂದ ಉಪನ್ಯಾಸ “ನಾನೂ0ದ್ರೆ ನಂಗಿಷ್ಟ”
ಖ್ಯಾತ ಸಾಹಿತಿ,ಅನುವಾದಕಿ, ಬಹುಭಾಷಾ ತಜ್ಞೆ ಶ್ರೀಮತಿ ಎಂ ಆರ್ ಕಮಲ ಅವರ ಅಧ್ಯಕ್ಷತೆಯಲ್ಲಿ ಸಂಘದ ಸದಸ್ಯರ ಹಾಗೂ ಎರಡನೆಯ ಶನಿವಾರದ ಕಾರ್ಯಕ್ರಮಕ್ಕೆ ಪ್ರತಿ ತಿಂಗಳೂ ಆಗಮಿಸುತ್ತಿರುವ ಲೇಖಕರ, ಕವಿಗಳ ಕವಿಗೋಷ್ಠಿ
ನಂತರ ಭರತನಾಟ್ಯ ಕಾರ್ಯಕ್ರಮ ಆರಾಧನಾ ವಿದುಷಿ ನವ್ಯಾ ಪ್ರಮೋದ ಹಾಗೂ ಶಿಷ್ಯೆಯರಿ೦ದ ಜರುಗುತ್ತದೆ.
ಎಲ್ಲರಿಗೂ ಆತ್ಮೀಯ ಆಮಂತ್ರಣವಿದೆಯೆಂದು ಕಾರ್ಯಕ್ರಮ ಸಂಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
