ಯಾದಗಿರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿನ್ನಪ್ಪ ಪೂಜಾರಿ ರಾಜ್ಯ ಅಧ್ಯಕ್ಷರು ಈ ಬಣದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನೂತನ ಅಧ್ಯಕ್ಷರಾದ ಧರ್ಮಣ್ಣ ತಶಿಲ್ದಾರ ಮತ್ತು ಧರ್ಮರೆಡ್ಡಿ ಕನ್ಯಾಕೊಳೂರ ತಾಲೂಕಾ ಕಾರ್ಯದರ್ಶಿ ಅವರಿಗೆ ವಿವಿಧ ಸಂಘಟನೆ ಅಧ್ಯಕ್ಷರು ಮತ್ತು ಅಭಿಮಾನಿಗಳು ಸೇರಿ ಶಾಖಾಪೂರ ಗ್ರಾಮದ ಶ್ರೀ ವಿಶ್ವರಾಧ್ಯ ಮಠದಲ್ಲಿ ಸನ್ಮಾನ ಸಮಾರಂಭ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುದಕ್ಕ ಗೌಡ, ರಾಘು ಪೊಲೀಸ್ ಪಾಟೀಲ್, ಪವನ್ ಅಂದೊಲ, ಮಲ್ಲು ಹಿರೇಮಠ, ಭೀಮರೆಡ್ಡಿ, ಶಾಂತ ಗೌಡ ಪೊಲೀಸ್ ಪಾಟೀಲ್ ಭಾಗವಹಿಸಿದ್ದರು.
