ನಿನ್ನೆ ರಾಯಚೂರಿಗೆ ಭೇಟಿ ನೀಡಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ರಾಯಚೂರಿನ ನೃಪತುಂಗ ಹೋಟೆಲ್ ನಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಆಮ್ಲಜನಕ (ಆಕ್ಸಿಜನ್) ಕ್ರಾಂತಿ ಯೋಜನೆಯ ಕುರಿತು ಮಾಹಿತಿ ನೀಡಿ ಯೋಜನೆಗೆ ಸರ್ಕಾರದ ವತಿಯಿಂದ ಬೆಂಬಲಿಸಿ ಪ್ರೋತ್ಸಾಹಿಸುವಂತೆ ವನಸಿರಿ ಫೌಂಡೇಷನ್ ದೇವದುರ್ಗ ತಾಲೂಕು ಅಧ್ಯಕ್ಷ ಪ್ರಕಾಶ ಪಾಟೀಲ್ ಶಾವಂತಗೇರಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಗಿಡಮರಗಳನ್ನು ನೆಡುವ ಮೂಲಕ ಸುಸ್ಥಿರ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಬೇಸಿಗೆಯಲ್ಲಿ ಗೂಡಿನಲ್ಲಿ ಹೆಚ್ಚಿನ ತಾಪಮಾನದಿಂದ ಸುರಕ್ಷಿತವಾಗಿರಲು ನಾಗರಿಕರಿಗೆ,ಪಕ್ಷಿಗಳಿಗೆ ಭವಿಷ್ಯದ ಜೀವನ ಗುಣಮಟ್ಟವನ್ನು ಸುರಕ್ಷಿತಗೊಳಿಸಲು ಗಿಡ ಮರಗಳನ್ನು ನೆಡಲಾಗುತ್ತಿದೆ. ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಂಧರ್ಭದಲ್ಲಿ ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವ ಸರ್ಕಾರದ ದೃಷ್ಟಿಯೊಂದಿಗೆ ಈ ಯೋಜನೆಯ ಹೊಂದಾಣಿಕೆಯಾಗುತ್ತದೆ. ಇದು ಪ್ರದೇಶದಲ್ಲಿ ಹಸಿರನ್ನು ಹೆಚ್ಚಿಸುವುದಲ್ಲದೆ ಪರಿಸರ ಸಮತೋಲನವನ್ನು ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ.ಕಾರಣ ನಮ್ಮ ವನಸಿರಿ ಪೌಂಡೇಷನ್ ಕೈಗೊಂಡ ಆಮ್ಲಜನಕ (ಆಕ್ಸಿಜನ್) ಕ್ರಾಂತಿಗೆ ತಾವು ಈ ವಿಷಯವನ್ನು ಅತ್ಯಂತ ಕಾಳಜಿ ವಹಿಸಿ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಕಲ್ಯಾಣ ಕರ್ನಾಟಕದ ರಾಯಚೂರು, ಬೀದರ್,ಕಲುಬುರ್ಗಿ, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆಕ್ಸಿಜನ್ ಕ್ರಾಂತಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಹಕರಿಸಬೇಕೆಂದು ಮತ್ತು ಬೆಂಬಲಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಷನ್ ದೇವದುರ್ಗ ಗೌರವ ಅಧ್ಯಕ್ಷ ಶೇಖರೇಶ್ ಪಾಟೀಲ್,ಕಾರ್ಯದರ್ಶಿ ವೆಂಕಟರೆಡ್ಡಿ ಸದಸ್ಯರಾದ ಅಂಬರೇಶ್ ಪಾಟೀಲ್ ಇನ್ನಿತರರು ಇದ್ದರು.
