ರಾಯಚೂರು/ಸಿಂಧನೂರು: ಹರಾಪುರ ವಿವಿದೋದ್ಧೋಶ ಪ್ರಾಥಮಿಕ ಕೃಷಿ ಗ್ರಾಮೀಣ ಪತ್ತಿನ ಸಹಕಾರ ಸಂಘದ ನೂತನವಾಗಿ ಅಧ್ಯಕ್ಷರಾದ ಹಾಗೂ ವನಸಿರಿ ತಂಡಕ್ಕೆ ಪ್ರತಿ ಕಾರ್ಯಕ್ಕೆ ಸಲಹೆ ಸಹಕಾರ ಬೆಂಬಲ ನೀಡುತ್ತಿರುವ ಉದ್ಯಮಿ,ಪರಿಸರ ಪ್ರೇಮಿಯಾದ ಶ್ರೀ ರಮೇಶ ಎಲೆಕೂಡ್ಲಿಗಿ ಅವರಿಗೆ ವನಸಿರಿ ಕಾರ್ಯಾಲಯದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರು ವನಸಿರಿ ಅಮರೇಗೌಡ ಮಲ್ಲಾಪುರ, ಬಸನಗೌಡ (ZP)ಎಲೆಕೂಡ್ಲಿಗಿ, S N ವೀರೇಶ,ಸುರೇಶ ರೆಡ್ದಿ ವಿರುಪಾಪುರ,ಆದೇಶ ತಿಡಿಗೊಳ ಶಿಕ್ಷಕರು,ಹುಸೇನ್ ಬಾಷಾ ಉರ್ದು ಶಾಲೆ ಶಿಕ್ಷಕರು, ರಾಜು ಪತ್ತಾರ ವನಸಿರಿ ಮಸ್ಕಿ ತಾಲೂಕ ಅಧ್ಯಕ್ಷ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಇದ್ದರು.
