ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ ದಿ. 07.01.2025 ರಂದು ಮಾನ್ಯ ಜಿಲ್ಲಾಧಿಕಾರಿಗಳು, ಸೈಕಲ್ ಮೂಲಕ ಹಡಗಲಿ ಪಟ್ಟಣದಲ್ಲಿ ಕೆಲವು ಪ್ರದೇಶಗಳನ್ನು ಭೇಟಿ ನೀಡಿ ಕುಡಿಯುವ ನೀರು, ರಸ್ತೆ, ಚರಂಡಿ, ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿದರು.
ತುಂಬಿ ನಿಂತಿರುವ ಚರಂಡಿಗಳನ್ನು ತಕ್ಷಣವೇ ಸ್ವಚ್ಚಗೊಳಿಸಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕುಡಿಯುವ ನೀರನ್ನು ಪ್ರತಿ ಎರಡು ದಿನಕ್ಕೊಮ್ಮೆ ಅವಶ್ಯಕತೆಗಳಿಗನುಸಾರ ಸರಬರಾಜು ಮಾಡುವಂತೆ ಹಾಗೂ ಇನ್ನೂ ಕೆಲವು ರಾಜ ಕಾಲುವೆಗಳ ದುರಸ್ಥಿ ಕಾರ್ಯವು ಅವಶ್ಯವಿದ್ದು ಈ ಸಂಬಂಧ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಪರಿಶೀಲಿಸಲಾಗಿ ಅಲ್ಲಿನ ಶೌಚಾಲಯದ ನೀರು ಹೊರಗಡೆ ಹೋಗುತ್ತಿದ್ದು ಒಂದು ವಾರದೊಳಗಾಗಿ ಶೌಚಾಲಯದ ನೀರನ್ನು ಯು.ಜಿ.ಡಿ.ಗೆ ಸಂಪರ್ಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು ಹಾಗೂ ಆಸ್ಪಿರೇಷನ್ ಯೋಜನೆಯಡಿಯಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಲು ತಕ್ಷಣವೇ ಸೂಕ್ತ ಸ್ಥಳ ಗುರುತಿಸಿ ಪಟ್ಟಣ ಪಂಚಾಯಿತಿಗೆ ವರ್ಗಾಯಿಸಲು ಸೂಚಿಸಿ, ಸಾರ್ವಜನಿಕ ಸ್ಮಶಾನವನ್ನು ಪರಿಶೀಲಿಸಲಾಯಿತು ಅಗತ್ಯವಿರುವ ಫ್ಲಡ್ ಲೈಟ್, ನೆರಳು, ಸಾರ್ವಜನಿಕ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವ ಸಂಬಂಧ ನಿಯಮಾನುಸಾರ ಕೂಡಲೇ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರು, 88- ಹಡಗಲಿ ವಿಧಾನಸಭಾ ಕ್ಷೇತ್ರ ಇವರು ಹಾಜರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
