ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಅಣಚಿ, ಮೈದರಗಿ ವಸತಿ, ಹಿಂಗಣಿ, ಹಲಸಂಗಿ ಯಲ್ಲಿ ಶಾಲಾ ಮಕ್ಕಳಿಗೆ ನನ್ನ ಕಣ್ಣು ಸುರಕ್ಷತೆ ಕುರಿತು ಇಂದು ದಿನಾಂಕ 08-01-2025 ರಂದು HPS ಅಣಚಿ ಶಿರಗೂರ ಹಾಗೂ ಮೈದರ್ಗಿ ವಸ್ತಿ ಹಿಂಗಣಿ, ಹೊನ್ನಮುರುಗಿ ವಸ್ತಿ ಅಣಚಿ, ಹಲಸಂಗಿ ಕ್ರಾಸ್ ಹಲಸಂಗಿ ಈ ಎಲ್ಲ ಶಾಲೆಗಳಲ್ಲಿ ಟೈಟಾನ್ ಕಂಪನಿ ಬೆಂಗಳೂರು ಅಲ್ಲದೆ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಚಡಚಣ ಇವರ ಆಶ್ರಯದಲ್ಲಿ ಶಾಲೆಯಲ್ಲಿ ದಾಖಲಾದ ಎಲ್ಲಾ ಮಕ್ಕಳಿಗೆ ಕಣ್ಣಿನ ಸುರಕ್ಷತೆ ಕುರಿತು ತಿಳಿ ಹೇಳುತ್ತಾ ಎಲ್ಲಾ ಮಕ್ಕಳಿಗೆ ಕಣ್ಣಿನ ತಪಾಸನೆ ಕೈಗೊಳ್ಳಲಾಯಿತು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು BIERT ಎಸ್ ಎಸ್ ಬೋರಗಿ ವಹಿಸಿದ್ದರು ಕಾರ್ಯಕ್ರಮದ ತಪಾಸಣೆಯನ್ನು ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಹಾಗೂ ಸಂಯೋಜಕರಾದ ಚಂದ್ರಪ್ಪ ಹಾಗೂ ಕಾಮಣ್ಣ ಕಣ್ಣಿನ ಸುರಕ್ಷತೆ ಕುರಿತು ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಹಾಗೂ ಸಹ ಶಿಕ್ಷಕ ವೃಂದದವರು ಸಹಕರಿಸಿ ಮಕ್ಕಳ ತಪಾಸಣೆ ಮಾಡಿಸಿದರು ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಎ ಕಣಮುಚನಾಳ ಹಾಗೂ ಸಹ ಶಿಕ್ಷಕರಾದ ಎ. ಬಿ. ಗೋಬ್ಬೂರ್, ತಳವಾರ ಸರ್, ಕುಬೇರಗೌಡ ಪಾಟೀಲ್ ಅಲ್ಲದೆ ಗುರು ಮಾತೆಯರು ಭಾಗವಹಿಸಿದ್ದರು.
ವರದಿ: ಮನೋಜ್ ನಿಂಬಾಳ
