ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಖರ್ಗೆ ಅವರ ವಿಚಾರಕ್ಕೆ ಬಂದರೆ ಸುಮ್ಮನಿರಲ್ಲ ಎಂದು ಯುವ ದಲಿತ ಮುಖಂಡ ಓಂಕಾರ ವಠಾರ ವಿಪಕ್ಷಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಬುದ್ಧ,ಬಸವ,ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಸರ್ವಜಾತಿ ಜನಾಂಗದವರನ್ನು ಗೌರವದಿಂದ ಕಾಣುವಂತಹ ಒಬ್ಬ ಒಳ್ಳೆಯ ಪ್ರಾಮಾಣಿಕ ರಾಜಕಾರಣಿ. ಇಂಥ ಒಬ್ಬ ಒಳ್ಳೆಯ ರಾಜಕಾರಣಿ ವಿರುದ್ಧ ಬಿಜೆಪಿ ನಾಯಕರು ಮತ್ತು ಆಂದೋಲ ಶ್ರೀಗಳ ಹೇಳಿಕೆ ಅರ್ಥವಿಲ್ಲದ ಹೇಳಿಕೆಯಾಗಿದೆ ಶ್ರೀಗಳಿಗೆ ನಾಚಿಕೆಯಾಗಬೇಕು ಎಂದು ಅವರು ಟೀಕಿಸಿದರು.
ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ತಳಕು ಹಾಕುವುದು ಸರಿಯಲ್ಲ. ರಾಷ್ಟ್ರಮಟ್ಟದವರೆಗೆ ಗುರುತಿಸಿಕೊಂಡು
ಗೌರವದಿಂದ ಎಲ್ಲಾ ಜಾತಿ ಜನಾಂಗದ ಏಳಿಗೆಯನ್ನು ಬಯಸುವಂತವರು ಪ್ರಿಯಾಂಕ್ ಖರ್ಗೆ ಅವರ ಮೇಲೆ ಸುಳ್ಳು ಆರೋಪವನ್ನು ಮಾಡುವುದು ನಿಲ್ಲಿಸಿ. ಸಚಿನ ಪಾಂಚಾಳರವರ ಆತ್ಮಹತ್ಯೆ ಪ್ರಕರಣ ನ್ಯಾಯಯುತವಾದ ನ್ಯಾಯಾಂಗ ತನಿಕೆಯಿಂದ ನ್ಯಾಯಕೊಡಿಸಿ ‘ಬೇಕೇ ವಿನಃ ಸಚಿನ ಪಂಚಾಳರ ಸಾವಿನ ಕಾರಣ ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು ಇದು ಅರ್ಥವಲ್ಲದು ಎಂದು ಬಿಜೆಪಿಯ ನಾಯಕರುಗಳು ತಿಳಿದುಕೊಳ್ಳಬೇಕು ಎಂದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ತಳಕು ಹಾಕುವುದಾಗಲಿ ರಾಜೀನಾಮೆ ಕೇಳುವುದಾಗಲಿ ‘ಜಾತಿವಾದಿ ಬಿಜೆಪಿ ನಾಯಕರ ಆಂದೋಲ ಶ್ರೀಗಳ ಸುಳ್ಳು ಹೇಳುವದು ಇವರ ಚಾಳಿಯಾಗಿದೆ. ಸಮಾಜದಲ್ಲಿ ಅಶಾಂತಿ ಕದಡುವುದು. ವಿಷ ಬೀಜವನ್ನು ಬಿತ್ತುವುದು ಜಾತಿ ವಿರೋಧಿ ಬಿಜೆಪಿ ನಾಯಕರುಗಳು ಹಾಗೂ ಆಂದೋಲ ಶ್ರೀಗಳು ಕೂಡಲೇ ಇಂಥ ಚಟುವಟಿಕೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಜಾತಿ ಜಾತಿಯಲ್ಲಿ ವಿಷ ಬೀಜವನ್ನು ಬಿತ್ತುವಂತ ಸುಳ್ಳು ಆರೋಪ ಮಾಡುವವರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
