ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಗಡಿನಾಡು ಪತ್ರಿಕೆಯ ಮಾಲೀಕರಾದ ರಾಮಾಂಜಿನಪ್ಪ ಅವರ ಮೇಲೆ ನಡೆದ ಅಮಾನವೀಯ ಹಲ್ಲೆಯನ್ನು ಖಂಡಿಸಿ ಕರ್ನಾಟಕ ಸರ್ಕಾರದ ಮಾಜಿ ಪ್ರಾಥಮಿಕ ಶಿಕ್ಷಣ ಸಚಿವರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಬಿಜೆಪಿ ರಾಜ್ಯ ಉಪಾಧ್ಯಕ್ಷರು ಆದ ಎನ್ ಮಹೇಶ್ ರವರು ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರಾದ ರಾಮಾಂಜನಪ್ಪ ಅವರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿ, ದೌರ್ಜನ್ಯ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಲಿಸ್ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿ, ಆಸ್ಪತ್ರೆಯಲ್ಲಿ ವೈದ್ಯರು ಅವರ ಆರೋಗ್ಯ ಇನ್ನೂ ಸುಧಾರಿಸದೆ ಇದ್ದರೂ ಎಡ ಕಣ್ಣಿಗೆ ಬಲವಾದ ಪೆಟ್ಟು ಬಿದ್ದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು ಗುಣಮಟ್ಟದ ಚಿಕಿತ್ಸೆ ಕೊಡದೆ ಡಿಸ್ಚಾರ್ಜ್ ಮಾಡಿಕೊಂಡು ಹೋಗಿ ಅಂತ ಒತ್ತಾಯ ಮಾಡಿದ್ದರು, ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಮಾತನಾಡಿ ಡಿಸ್ ಚಾರ್ಜ್ ಮಾಡಬೇಡಿ ಅವರ ಆರೋಗ್ಯ ಚೇತರಿಕೆ ಆಗುವವರೆಗೂ ಆಸ್ಪತ್ರೆಯಲ್ಲಿ ಇರಲಿ ನೀವು ಉತ್ತಮ ಚಿಕಿತ್ಸೆ ಕೊಡಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಪರಿವರ್ತನಾ ಸಂಘ ಪಾವಗಡ ತಾಲೂಕು ಸಂಯೋಜಕರಾದ ಹರಿಹರಪುರ ಗ್ರಾಮದ ಎಚ್ ಡಿ ಈರಣ್ಣ ರವರು ಮತ್ತು ತುಮಕೂರು ಜಿಲ್ಲಾಧ್ಯಕ್ಷ ಚಿಕ್ಕ ತಿಮ್ಮನಹಟ್ಟಿ ಗ್ರಾಮದ ಎಚ್ ಕೆಂಚರಾಯ ಇತರರು ಉಪಸ್ಥಿತರಿದ್ದರು.
ವರದಿ – ಪೃಥ್ವಿರಾಜು ಜಿ. ವಿ
