ಗದಗ: ಇತ್ತೀಚೆಗೆ ಶಾಯಿರಿ ಸಾಹಿತ್ಯ ಪ್ರಕಾರ , ಕನ್ನಡ ದಲ್ಲಿ ಜನಪ್ರಿಯ ವಾಗುತ್ತಿದೆ, ಇದು ಸಾಹಿತ್ಯ ಪ್ರಿಯರಿಗೆಲ್ಲಾ ಖುಷಿ ಕೊಡುವ ಸಂಗತಿ ಮತ್ತು ಹೆಮ್ಮೆಯ ವಿಷಯ.
ಈ ಹಿನ್ನೆಲೆಯಲ್ಲಿ ಇದೇ ಭಾನುವಾರ ಗದಗ ನಗರದಲ್ಲಿ,
ಕಬ್ಬಿಗರ ಕೂಟ, ಸಭಾಂಗಣದಲ್ಲಿ ಶಾಯಿರಿ ಕವಿಗಳಾದ ಮರುಳಸಿದ್ದಪ್ಪ, ದೊಡ್ಡಮನಿ ಮತ್ತು ಯಲ್ಲಪ್ಪ ಹರನಾಳಗಿ,ಅವರ ಸಂಯುಕ್ತ ಸಂಪಾದಕತ್ವದಲ್ಲಿ ನಾಡಿನ ವಿವಿಧ ಭಾಗದ ಹನ್ನೊಂದು ಜನ ಶಾಯಿರಿ ಕವಿಗಳ “ನೂರ್ ಹನ್ನೊಂದು ಶಾಯಿರಿಗಳು” ಎನ್ನುವ ಪುಸ್ತಕ ಲೋಕಾರ್ಪಣೆಯಾಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಶಾಯಿರಿ ಕವಿಗಳಾದ ಚಿತ್ರದುರ್ಗದ ಡಾ.ಪರಮೇಶ್ವರಪ್ಪ ಕುದರಿ, ಅವರು ವಹಿಸಲಿದ್ದು , ಶಾಯಿರಿ ಸಂಕಲನವನ್ನು , ಖ್ಯಾತ ಕವಿ, ವಿಮರ್ಶಕರಾದ ಡಾ.ಬಸೂ ಬೇವಿನ ಗಿಡದ ಲೋಕಾರ್ಪಣೆ ಮಾಡಲಿದ್ದಾರೆ.
ಕೃತಿ ಕುರಿತು ಗದಗಿನ ಸಿದ್ದಲಿಂಗೇಶ ಸಜ್ಜನ ಶೆಟ್ಟರ್, ಕನ್ನಡ ಉಪನ್ಯಾಸಕರು,ಮಾತನಾಡಲಿದ್ದಾರೆ, ಮರುಳು ಸಿದ್ದಪ್ಪ ದೊಡ್ಡಮನಿ,ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಕೊಪ್ಪಳದ ಶಿಕ್ಷಕ, ಕವಿ, ಶ್ರೀನಿವಾಸ ಚಿತ್ರಗಾರ ಅವರು ಸ್ವಾಗತಿಸಲಿದ್ದಾರೆ, ಶಿಲ್ಪಾ ಮ್ಯಾಗೇರಿ, ವಂದನಾರ್ಪಣೆ ಮಾಡುವರು. ಸಾಹಿತಿಗಳು, ಸಾಹಿತ್ಯದ ಅಭಿಮಾನಿಗಳು, ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಶಿವಪ್ರಸಾದ್ ಹಾದಿಮನಿಯವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
