ಬೆಂಗಳೂರು : “ಮಾತಿನ ಮನೆ”ಯಲ್ಲಿ ಈ ವಾರದ ಕಾರ್ಯಕ್ರಮವಾಗಿ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಅವರಿಂದ ಪಾರ್ಥಸಾರಥ್ಯ ತಾಳಮದ್ದಲೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶ್ರೀ ಕೃಷ್ಣಸಂಧಾನದ ಪ್ರಸಂಗದ ಒಂದು ಭಾಗದಲ್ಲಿ ಶೈಲಸುತೆ ರಂಜಿತಾ, ಸಹನಾ ರಾಜೇಶ್, ಅಜಿತ್ ಕಾರಂತ ಹಾಗೂ ಸುಹಾಸ್ ಮರಾಠೆ ಆಖ್ಯಾನಿಸಿದ ಈ ಪ್ರಸಂಗದಲ್ಲಿ ಎ ಪಿ ಫಾಟಕ್, ಅನಂತ ಕುಮಾರರ ಭಾಗವತಿಕೆ ಹಾಗೂ ಚಿನ್ಮಯ ಹೆಗಡೆಯವರ ಮದ್ದಲೆ ಸುಶ್ರಾವ್ಯವಾಗಿ ನಡೆಸಲಾಗಿತ್ತು.
ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಶ್ರೀ ರಾ ಸು ವೆಂಕಟೇಶ ನಿರ್ವಹಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
