ಬೀದರ್: ದಿ. 13/01/2025 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸ್ಪಂದನ ಕೇಂದ್ರ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಪದವಿ ಪೂರ್ವ ಕಾಲೇಜು ಬೀದರ್ ನಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಕ್ಷೇತ್ರ ಸಂಯೋಜಕರಾದ ಶ್ರೀ ನಾಗರಾಜ್ ರವರು ಯುವ ಜನತೆಯಲ್ಲಿನ ಮಾನಸಿಕ ಗೊಂದಲ , ಆಯ್ಕೆಗಳ ನಿರ್ಧಾರ, ಮೊಬೈಲ್ ಅಡಿಕ್ಷನ್ ಸಂಬಂಧಗಳ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವರಾಜ್ ಬಲ್ಲೂರ್ , ಮಕ್ಕಳ ಕಲ್ಯಾಣ ಅಧಿಕಾರಿಗಳಾದ ನಿಲೇಶ್ ರತ್ನಾಕರ್, ಕ್ಷೇತ್ರ ಯುವ ಸ್ಪಂದನ ಕಾರ್ಯಕ್ರಮದ ಸಂಪರ್ಕ ಅಧಿಕಾರಿಗಳಾದ ಶ್ರೀ ರಮೇಶ್, ಯುವ ಸಮಾಲೋಚಕರಾದ ಜೈ ಭೀಮ, ಯುವ ಪರಿವರ್ತಕರಾದ ದಿಗಂಬರರವರು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ರೋಹನ್ ವಾಘಮಾರೆ
