“ನೆನಪಿಂಗಳ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಹಾಗೂ 2022-23ನೇ ಸಾಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಾಗಿ ನೇಮಕ ಹೊಂದಿದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ”
ಬೀದರ್: ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರನಲ್ಲಿ ದಿನಾಂಕ : 05-01-2025ರಂದು ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಹಾಗೂ 2022-23ನೇ ಸಾಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಾಗಿ ನೇಮಕ ಹೊಂದಿದ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಡಾ. ರಜಿನೀಶ್ ವಾಲಿ, ಆಡಳಿತ ಮಂಡಳಿ ಸದಸ್ಯರು, ಹೈ.ಕ.ಶಿ. ಸಂಸ್ಥೆ ಕಲಬುರಗಿ ಅವರು ಸಸಿಗೆ ನೀರೇರುವ ಮೂಲಕ ಉದ್ಘಾಟಿಸಿ, ಜೀವನದಲ್ಲಿ ಯಶಸ್ಸು ಕಾಣ ಬೇಕಾದರೆ ವಿದ್ಯಾಭ್ಯಾಸವನ್ನು ಆಸಕ್ತಿಯಿಂದ ಕಲಿತಾಗ ಸಾಧನೆ ಗೈಯಲು ಸಾಧ್ಯವೆಂದು ಹೇಳಿದರು. ಶಿಕ್ಷಣ ರಂಗದಲ್ಲಿ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದುದು ಹಾಗೂ ಇಡೀ ಸಮಾಜ ಬದಲಾವಣೆ ಹಾಗೂ ನಿರ್ಮಾಣದ ಜವಾಬ್ದಾರಿಯು ಶಿಕ್ಷಕರ ಮೇಲಿರುವುದು ಅದನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಹೇಳಿದರು. ಸಂಸ್ಥೆಯ ಶೈಕ್ಷಣಿಕ ವೃತ್ತಿಪರ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವ ವೃತ್ತಿಪರರ ಬಲವಾದ ಜಾಲವನ್ನು ರಚಿಸಲು ಸಂಘವು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳ ಸಂಘವು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ, ಸಂಸ್ಥೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿ, ಜಾಗತಿಕ ಸಾಮರ್ಥ್ಯಗಳನ್ನು ಉತ್ತೇಜಿಸುತ್ತಾ ವಿದ್ಯಾರ್ಥಿಗಳಿಗೆ ವೃತ್ತಿ ಅವಕಾಶಗಳನ್ನು ವಿಸ್ತರಿಸಬೇಕು ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಲ್ಕಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ಜಿ.ಹಳ್ಳದ ಅವರು ಮಾತನಾಡುತ್ತಾ ವ್ಯಕ್ತಿ ತನ್ನ ಜೀವನದಲ್ಲಿ ತಂದೆ-ತಾಯಿ, ಗುರು ಹಾಗೂ ಪೋಷಕರನ್ನು ಸದಾ ನೆನೆಯಬೇಕು ಅವರಿಗೆ ಚಿರಋಣಿಯಾಗಿದ್ದು ಒಬ್ಬ ಸಮರ್ಥ ವ್ಯಕ್ತಿಯಾಗಿ ನಿರ್ಮಾಣವಾಗಬೇಕು ಎಂದು ಹೇಳಿದರು. ಮಹಾವಿದ್ಯಾಲಯದ ವಿದ್ಯಾರ್ಥಿಯೂ ಆಗಿದ್ದು, ಇಂದಿನ ಶಿಕ್ಷಕರಿಗೆ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ, ನಿಷ್ಠೆಯಿಂದ ನಿಭಾಯಿಸಿಕೊಂಡು ಹೋಗಬೇಕು ಇಡೀ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಶಿಕ್ಷಣವೆಂದರೆ ಅದು ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಸಮರ್ಥ ಶಿಕ್ಷಕರನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಾಸದ ಜೊತೆಗೆ ರಾಷ್ಟ್ರಾಭಿಮಾನ , ವೈಜ್ಞಾನಿಕ ಚಿಂತನೆ, ಸುಸ್ಥಿರ ಆರ್ಥಿಕ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಜವಾಬ್ದಾರಿಯ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನುಡಿದರು.
ಪ್ರಾಸ್ತಾವಿಕ ನುಡಿಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಚ. ಕನಕಟ್ಟೆ ಮಾತನಾಡುತ್ತಾ ಹಳೆಯ ವಿದ್ಯಾರ್ಥಿ ಸಂಘದ ಸ್ಥಾಪನೆ, ಸಂಘದ ಉದ್ದೇಶಗಳು ಮತ್ತು ಮಹತ್ವವನ್ನು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಶಂಭುಲಿಂಗ ವಾಲ್ದೊಡ್ಡಿ ಅಧ್ಯಕ್ಷತೆಯನ್ನು ವಹಿಸಿದರು, ಮುಖ್ಯ ಅತಿಥಿ ಸ್ಥಾನವನ್ನು ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಇನಾಯತ ಸಿಂಧೆ, ಗೌರವ ಉಪಸ್ಥಿತಿಯನ್ನು ಶ್ರೀ ರೇವಣಪ್ಪ ಮೂಲಗೆ, ಬಿ.ವಿ.ಬಿ. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ.ವಿಠ್ಠಲ ರೆಡ್ಡಿ ವಹಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಸಾಗರ ಎಸ್. ಪಡಸಲೆ ಯವರು 2011-12ನೇಯ ವಿದ್ಯಾರ್ಥಿಯಾಗಿದ್ದು ಅವರು ಗೌರವಾರ್ಥವಾಗಿ ಮಹಾವಿದ್ಯಾಲಯಕ್ಕೆ ಗೋಡೆ ಗಡಿಯಾರಗಳನ್ನು ಉಡುಗೊರೆಯಾಗಿ ನೀಡಿದರು.
ಪ್ರೌಢಶಾಲೆಯ ಶಿಕ್ಷಕರಾಗಿ ನೇಮಕ ಹೊಂದಿದೆ ಮಹಾವಿದ್ಯಾಲಯದ ಸುಮಾರು 52 ಸರ್ಕಾರಿ ಶಿಕ್ಷಕರಿಗೆ ವಿಶೇಷ ಸನ್ಮಾನ ಮಾಡಿದರು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀಮತಿ ವೀಣಾ ಜಲಾದಿ, ಸ್ವಾಗತವನ್ನು ಪಾಂಡುರಂಗ ಕುಂಬಾರ ಹಾಗೂ ವಂದನಾರ್ಪಣೆಯನ್ನು ಡಾ. ಸಂತೋಷಕುಮಾರ ಸಜ್ಜನ ನಡೆಸಿಕೊಟ್ಟರು.
ವರದಿ : ಚಂದ್ರಕಾಂತ ಝಬಾಡೆ
