ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಸಹಕಾರ ಸಂಘ ಆಡಳಿತ ಮಂಡಳಿಯ ವತಿಯಿಂದ ಮೂರನೇ ವರ್ಷದ ಸವಿ ನೆನಪಿಗಾಗಿ
ಸಹಕಾರ ಸಂಘದ ಅಧ್ಯಕ್ಷರಾದ ಎನ್ ಹೇಮಗಿರಿ ಗೌಡ್ರು ಇವರಿಂದ ವರ್ಷದ ಕ್ಯಾಲೆಂಡರ್
ಬಿಡುಗಡೆ ಮಾಡಿದರು.
ಕೋಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ರಚನೆಯಾಗಿ
ದಿ. 12.01.2025 ಮೂರು ವರ್ಷಗಳನ್ನು ಪೂರೈಸಿದ್ದು, ಸಂಘದ ಮೂರನೇ ವರ್ಷಚಾರಣೆ ಸವಿ ನೆನಪಿಗಾಗಿ ಸಂಘದ ಹೆಸರಿನಲ್ಲಿ ಇಂದು ಕ್ಯಾಲೆಂಡರ್ ಅನಾವರಣ ಮಾಡಿದರು.
ಕೋಗಳಿ ,ಕೆ ಕೋಡಿಹಳ್ಳಿ , ಕೋಗಳಿ ತಾಂಡ ಗ್ರಾಮದ ಷೇರುದಾರ ಸದಸ್ಯರುಗಳಿಗೆ ಸಂಘದ ಆಡಳಿತ ಮಂಡಳಿಯ ಪರವಾಗಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಎಂ ಬಸವರಾಜ, ಕೆ ಚಂದ್ರಪ್ಪ, ಕಾರ್ಯದರ್ಶಿ ವಿ. ರವಿ, ಸಂಘದ ಷೇರುದಾರ ಸದಸ್ಯರಾದ ಜಿ ಕೊಟ್ರೇಶಪ್ಪ, ಎಸ್ ಎಂ ಕಲ್ಯಾಣಿ, ಬಿ ಎಂ ಮರುಳಸಿದ್ದಯ್ಯ, ಕೆ ಉಮೇಶ, ಸಿ ಗೊಣ್ಣೆಪ್ಪ, ಎಸ್ ಎ ಶಶಿಧರ, ಕಾಳಪ್ಪ, ತಿಪ್ಪೇಶ, ಅಜ್ಜನಗೌಡ, ಪಿಗ್ಮಿ ಏಜೆಂಟ್ ಟಿ ಎಂ ಮಹೇಶ ಮುಂತಾದವರು ಉಪಸ್ಥಿತರಿದ್ದರು.
