ಮಾಜಿ ನಗರ ಪಾಲಿಕೆ ಮಾಜಿ ಸದಸ್ಯ ದಿವಂಗತ ಎನ್ ಸುನೀಲ್ ಕುಮಾರ್ ರವರ 43ನೇ ಯ ಸ್ಮರಣಾರ್ಥ ರಸ್ತೆಗೆ ಸುನೀಲ್ ಕುಮಾರ್ ಅವರ ಹೆಸರನ್ನು ಇಡುವಂತೆ ಮನವಿ : ತೇಜಸ್ವಿ ನಾಗಲಿಂಗ ಸ್ವಾಮಿ
ಮೈಸೂರು ಮಹಾ ನಗರ ಪಾಲಿಕೆ ಸದಸ್ಯರಾಗಿದ್ದ ಹಾಗೂ ವೀರಶೈವ ಲಿಂಗಾಯತ ಸಮಾಜದ ನಾಯಕರಾಗಿದ್ದ ದಿವಂಗತ ಎನ್ ಸುನೀಲ್ ಕುಮಾರ್ ರವರ 43ನೇಯ ಜನ್ಮ ದಿನವಾದ ೧೪ ಜನವರಿ ೨೦೨೫ ಇಂದು ವೀರಶೈವ ಲಿಂಗಾಯತ ಸಮಾಜದ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಸ್ಮರಣೆ ಮಾಡಿದ್ದಾರೆ.
ಪಾಲಿಕೆ ಸದಸ್ಯರಾಗಿದ್ದ ಅವರ ಅವಧಿಯಲ್ಲಿ ಅಗ್ರಹಾರ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಈಗಾಗಲೇ ಸುನೀಲ್ ಕುಮಾರ್ ರವರ ಹೆಸರನ್ನು ಅಗ್ರಹಾರ ವಾರ್ಡಿನ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದರು ಸಹ ಸಂಭಂದ ಪಟ್ಟ ಅಧಿಕಾರಿಗಳು ಸ್ಪಂದಿಸದೆ ಇರುವುದು ಬೇಸರದ ಸಂಗತಿ ಎಂದು ತೇಜಸ್ವಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆದರೂ ರಸ್ತೆ ಹೊಂದಕ್ಕೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿವಂಗತ. ಎನ್. ಸುನೀಲ್ ಕುಮಾರ್ ರವರ ಹೆಸರನ್ನು ಇಡಬೇಕು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.
