ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರ(ಜಾಲಿಹಾಳ್ ಕ್ಯಾಂಪ್) ಶ್ರೀ ಗುರು ಸಿದ್ದೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿಷಯವಾರು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಶಿಬಿರ ಕಾರ್ಯಕ್ರಮ ಅಚ್ಚು ಕಟ್ಟಾಗಿ ನೆರವೇರಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ.ಮಾಜಿ ಅಧ್ಯಕ್ಷರಾದ ಅಂಬಮ್ಮ ಗಂಡ ಸೋಮಶೇಖರಪ್ಪ ವಹಿಸಿಕೊಂಡಿದ್ದರು. ಜಾಲಿಹಾಳ ವಲಯದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಕೃಷ್ಣಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಾಲಿಹಾಳ ವಲಯದಲ್ಲಿ ಬರುವ ಎಲ್ಲಾ ಪ್ರೌಢಶಾಲಾ ವಿಭಾಗದ 262 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 231 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪರೀಕ್ಷೆಯು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿತ್ತು. ವಿದ್ಯಾರ್ಥಿಗಳ ಓ ಎಂ ಆರ್ ಉತ್ತರ ಪ್ರತಿಗಳನ್ನು ಸ್ಕ್ಯಾನಿಂಗ್ ಮೂಲಕ ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ಪ್ರಕಟಿಸಲಾಯಿತು. ಪ್ರಥಮ ಸ್ಥಾನ ಸುನೀತಾ ಎಚ್ ಡಾ.ಬಿ.ಆರ್.ಅಂಬೇಡ್ಕರ್ ಶಾಲೆ ಜಾಲಿಹಾಳ,ದ್ವಿತೀಯ ಸ್ಥಾನ ಬಸಲಿಂಗಮ್ಮ ಡಾ.ಬಿ. ಆರ್.ಅಂಬೇಡ್ಕರ್ ಶಾಲೆ ಜಾಲಿಹಾಳ ಮತ್ತು ತೃತೀಯ ಸ್ಥಾನ ಉಸ್ಮಾನ ಶ್ರೀ ಗುರು ಸಿದ್ಧೇಶ್ವರ ಪ್ರೌಢ ಶಾಲೆ ಗಾಂಧಿನಗರ ವಿದ್ಯಾರ್ಥಿಗಳು ಪಡೆದುಕೊಂಡರು. ನಂತರದ ಏಳು ಸ್ಥಾನಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕ ಶಿಕ್ಷಕರಾದ ಮಲ್ಲಿಕಾರ್ಜುನಯ್ಯ ಹಿರೇಮಠ ತಿಳಿಸಿದರು.
ಈ ಸಂದರ್ಭದಲ್ಲಿ T.ಯಲ್ಲಪ್ಪ ಗ್ರಾ.ಪಂ.ಸದಸ್ಯರು, ಕಿರಣ ಕುಮಾರ, ನಂದಿನಿ ಶ್ರೀನಿವಾಸ, ಮಹ್ಮದ್ ರಫಿ SDMC ಅಧ್ಯಕ್ಷರು, ರಾಜಾಸಾಬ್ ಕ.ರ. ವೇ.ತಾ.ಘ.ಉಪಾಧ್ಯಕ್ಷರು, ಶಿವರಾಜ ಹೂಗಾರ ಕೆ. ಹೊಸಹಳ್ಳಿ, ಮಹಾದೇವಪ್ಪ ಟೇಲರ್, ಶಿಕ್ಷಣ ಪ್ರೇಮಿಗಳು ಮತ್ತು ಎಲ್ಲಾ ಶಾಲೆಗಳ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
