ರಟಕಲನಲ್ಲಿ ಲಕ್ಷಪ್ಪ ಜಮಾದಾರ್ ಹೇಳಿಕೆ
ಕಲಬುರಗಿ/ ಕಾಳಗಿ ವರದಿ:
12ನೇ ಶತಮಾನದ ಅವಧಿಯಲ್ಲಿ ಸಮಾಜದಲ್ಲಿ ಭದ್ರವಾಗಿ ಬೇರೂರಿದ್ದ ಜಾತಿಯತೆ ಮೌಢ್ಯತೆ ಲಿಂಗ ಅಸಮಾನತೆ ಮೂಢನಂಬಿಕೆ ಎಂತಹ ಅನಿಷ್ಟಗಳನ್ನು ಹೋಗಲಾಡಿಸಲು ಶ್ರೀ ನಿಜ ಶರಣ ಎಂದೇ ಖ್ಯಾತಿ ಹೊಂದಿರುವ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರು ತಮ್ಮ ನೇರ ದಿಟ್ಟ ವಚನಗಳಿಂದಲೇ ಸಮಾಜದ ಅಂಕುಡೊಂಕುಗಳನ್ನು ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಲಕ್ಷಪ್ಪ ಜಮಾದಾರ್ ಹೇಳಿದರು.
ಕಾಳಗಿ ತಾಲೂಕಿನ ರಟಕಲ ಗ್ರಾಮದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಸಮಿತಿಯ ವತಿಯಿಂದ ಹಮ್ಮಿಕೊಂಡ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ , ಜಯಂತೋತ್ಸವ, ಪುರಾಣ ಮಹಾಮಂಗಳ, ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಗಳಿಗೆ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋಲಿ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮಾಜಗಳಲ್ಲಿ ಒಂದು ಈ ಸಮಾಜಕ್ಕೆ ಪರಿಶಿಷ್ಟ ಪಂಗಡ ಸ್ಥಾನ ಮಾನಕ್ಕಾಗಿ ನಿರಂತರವಾಗಿ ನಮ್ಮ ಹೋರಾಟ ಜರುಗಿದ್ದು ಸರಕಾರಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಅನಿವಾರ್ಯತೆ ಇದೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಗಾಯಕ ದಲ್ಲಿ ನಿರತರಾಗುವಂತೆ ತಿಳಿಸಿದರು.
ತದ ನಂತರ ಯೋಗಿಯ ಶ್ರೀಗಳಿಗೆ ಸಿರಿ ಧಾನ್ಯಗಳಲ್ಲಿ ತುಲಾಭಾರ ಸೇವೆ ಕೈಗೊಳ್ಳಲಾಯಿತು, ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಸತ್ಕರಿಸಿ ಬಹುಮಾನ ವಿತರಣೆ ಮಾಡಲಾಯಿತು.
ರೇವಗ್ಗಿಯ ಗೌರಿ ಗುಡ್ಡದ ಶ್ರೀ ಸಿದ್ದ ಶಿವಯೋಗಿ ಶಿವಾಚಾರ್ಯರು, ಎಸ್ ಟಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಮಲಿಂಗ ನಾಟೀಕಾರ್, ಕಲಬುರ್ಗಿ ವಿವಿಯ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಬೈಲಪ್, ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಕಾಳಗಿ ತಾಲೂಕು ಬಿಜೆಪಿ ಅಧ್ಯಕ್ಷ ವಿಜಯಕುಮಾರ್ ಚೇಂಗಟಿ, ವೈಜನಾಥ ಜಮಾದಾರ್, ನಾಗೇಶ್ ಧಮ್ಮೂರ, ಶಿವರಾಯ ಮುಜಗೇರ, ಬಸವರಾಜ ತಳವಾರ, ಮಲ್ಲಿಕಾಜು೯ನ ಮರಗುತ್ತಿ, ಶರಣು ಹಣಕುಣಿ , ರೇವಣಸಿದ್ದ ವಾಡೇದ, ಮಲ್ಲು ಚಿಕ್ಕಾಗಸಿ, ತಿಪ್ಪಣ್ಣಾ ಕಾಳಮಂದರಗಿ ಇತರರು ಇದ್ದರು.
