ಭದ್ರಾವತಿ: ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀ ಆರ್ ಎಂ ಮಂಜುನಾಥ ಗೌಡ ಅವರು ಭೇಟಿ ನೀಡಿ ವಿವಿಧ ಸಂದರ್ಶನಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಕೆ ಆರ್ ಡಿ ಎಲ್ ಅಧ್ಯಕ್ಷರಾದ ಶ್ರೀ ಬಿ.ಕೆ ಸಂಗಮೇಶ್ ಅವರ ಸಹೋದರರು ಹಾಗೂ ರಾಜ್ಯ ಮಹಿಳಾ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕ್ಕರ್ ಅವರ ಬೀಗರಾದ ಶ್ರೀ ಬಿ ಕೆ ಶಿವಕುಮಾರ್ ಅವರು ಆಕಾಶವಾಣಿ ಸಂಸ್ಥೆಗೆ ಆಗಮಿಸಿ ಶ್ರೀ ಆರ್ ಎಂ ಮಂಜುನಾಥ ಗೌಡ ಅವರನ್ನು ಗೌರವಿಸಿದರು.
ಈ ಸುಸಂಧರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ ಕೆ ಶಿವಕುಮಾರ್ ಅವರನ್ನು ಶ್ರೀ ಆರ್ ಎಂ ಎಂ ಗೌಡರು ಅಭಿನಂದಿಸಿದರಲ್ಲದೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ರಮೇಶ್ ಶಂಕರಘಟ್ಟ ದಶರಥಗಿರಿ ಪ್ರಮುಖರು ಉಪಸ್ಥಿತಿ ಇದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
