ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಚ್. ಆಂಜನೇಯ ಸಚಿವರಾಗಲು ಕೋರಿ ಗಡೇ ದುರ್ಗಾದೇವಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು

ಯಾದಗಿರಿ: ಎಚ್ ಆಂಜನೇಯವರನ್ನು ಎಂ ಎಲ್ ಸಿ ಮತ್ತು ಸಚಿವರನ್ನಾಗಿ ಮಾಡಲು ವಡಗೇರಾ ತಾಲ್ಲೂಕಿನ ಗೋನಾಲದ ಶ್ರೀ ಗಡೇ ದುರ್ಗಾದೇವಿ ಮೊರೆಹೋದ ಅಭಿಮಾನಿಗಳು ಶನಿವಾರ ಪೂಜೆ ಸಲ್ಲಿಸಿ ಹರಕೆ (ಕೋರಿಕೆ) ಪತ್ರವನ್ನು ತಾಯಿಯ ಉಡಿಯಲ್ಲಿಟ್ಟು ಪ್ರಾರ್ಥನೆ ಸಲ್ಲಿಸಿದರು.
ಸುಕ್ಷೇತ್ರ ಗೋನಾಲ ಗ್ರಾಮದ ಐತಿಹಾಸಿಕ ಶ್ರೀ ಗಡೇ ದುರ್ಗಾದೇವಿಯು ಅತ್ಯಂತ ಶಕ್ತಿಯುತವಾದ ದೇವತೆಯಾಗಿದ್ದು ಮನದ ಕೋರಿಕೆಯನ್ನು ತಾಯಿಯ ಮುಂದೆ ಹೇಳಿಕೊಂಡು ಪೂಜೆ ಮಾಡಿಸಿ ಭಕ್ತಿಯಿಂದ ಪ್ರಾರ್ಥಿಸಿದರೆ ಆ ಕೆಲಸ ಖಂಡಿತ ನೆರವೇರುತ್ತೆ ಎಂಬುದು ಇಂದಿನ ವಾಡಿಕೆ ಆದ್ದರಿಂದ ದೇವಸ್ಥಾನಕ್ಕೆ ಎಚ್ ಆಂಜನೇಯ ಅಭಿಮಾನಿಗಳು ಭೇಟಿ ನೀಡಿ ಎಚ್ ಆಂಜನೇಯವರನ್ನು ಎಂ ಎಲ್ ಸಿ ಮತ್ತು ಸಚಿವರನ್ನಾಗಿ ಮಾಡುವಂತೆ ಪತ್ರ ಬರೆದು ಪೂಜಾರಿ ಮರಿಸ್ವಾಮಿಯವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಅವರ ಅಭಿಮಾನಿ ಹಾಗೂ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್ ಸಿ ವಿಭಾಗ ಸಂಘಟನಾ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮಲ್ಲು ಹಲಗಿ ಕುರಕುಂದಿ ಇವರು ಮಾತನಾಡಿ, ಎಚ್ ಆಂಜನೇಯ ಅವರು ಮಾದಿಗ ಸಮುದಾಯದ ಬಹುದೊಡ್ಡ ನಾಯಕರಾಗಿದ್ದು ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ನಗರ ಸಭೆ ಸದಸ್ಯರಿಂದ ಹಿಡಿದು ತಾಲೂಕು ಹಾಗೂ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳಾಗಿ ಮತ್ತು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾಗಿ ರೈತರಿಗೂ ವಿದ್ಯಾರ್ಥಿಗಳಿಗೂ ಬಡವರಿಗೂ ಬೇದ ಭಾವ ಮಾಡದೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿ ಪ್ರತಿಯೊಬ್ಬರಿಗೆ ಸೌಲಭ್ಯಗಳನ್ನು ಒದಗಿಸಿ ಕೊಟ್ಟು, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮಾದರಿ ನಾಯಕ ಎನಿಸಿಕೊಂಡಿದ್ದಾರೆ.
ಮೇ 2023 ರ ವಿಧಾನಸಭಾ ಚುನಾವಣೆಯಲ್ಲಿ ಆಂಜನೇಯ ಅವರು ಉಪಮುಖ್ಯ ಮಂತ್ರಿಗಳಾಗುತ್ತಾರೆ ಎಂದು ಇಡೀ ಮಾದಿಗ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಮತ ನೀಡಿ ಸಿದ್ದರಾಮಯ್ಯ ಸರ್ಕಾರಕ್ಕೆ ಹೆಚ್ಚಿನ ಬಹುಮತ ಕೊಟ್ಟು ಸರಕಾರ ರಚನೆಗೆ ಕಾರಣರಾಗಿದ್ದಾರೆ. ಆದರೆ ಹೊಳಲ್ಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಆಂಜನೇಯ ಅವರಿಗೆ ಕೆಲ ಕುತಂತ್ರಗಳಿಂದ ಸೋಲಾಯಿತು.
ಆದರೆ ಸೋಲಿಗೆ ಅಂಜದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಪ್ರಾಮಾಣಿಕರಾಗಿ ಹಗಲಿರಲು ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಲ್ಲಿ ಚುನಾವಣೆ ಪ್ರಚಾರ ಹಾಗೂ ಪಕ್ಷದ ವಿವಿಧ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಪಕ್ಷವೇ ತಾಯಿ ಉಸಿರು ಎಂದು ನಂಬಿ ದುಡಿಯುತ್ತಿದ್ದ ಇವರು ಅಧಿಕಾರ ಇದ್ದರೂ ಇಲ್ಲದಿದ್ದರೂ ಜನರಿಗಾಗಿ ಸದಾಕಾಲವು ಸಹಾಯ ಸಹಕಾರ ನೀಡಿ ನೆರವಾಗುತ್ತಾ ಬರುತ್ತಿದ್ದಾರೆ.
ವಿಧಾನಸಭೆಯ ಉಪಚುನಾವಣೆಯಲ್ಲಿ ಕೂಡಾ ಮೂರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಲು ಶ್ರಮವಹಿಸಿದ್ದಾರೆ ಮತ್ತು ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ರಾಜೀವ್ ಗಾಂಧಿ ಅವರೊಂದಿಗೂ ಒಡನಾಟ ಹೊಂದಿದ್ದರು.
ಇಂಥ ಧೀಮಂತ ನಾಯಕ ನಿಷ್ಠಾವಂತ ಪ್ರಮಾಣಿಕರಾಗಿರುವ ಎಚ್ ಆಂಜನೇಯವರನ್ನು ಎಂ ಎಲ್ ಸಿ ಮಾಡಿ ಸಚಿವರಾಗಿ ಮಾಡಬೇಕು ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸೋತ ಆರ್ ಬಿ ತಿಮ್ಮಪೂರ ಅವರನ್ನು ಹಾಗೂ ಜಿ ಪರಮೇಶ್ವರ್ ಅವರನ್ನು ಎಂ ಎಲ್ ಸಿ ಯನ್ನಾಗಿ ಮಾಡಿ ಸಚಿವರನ್ನಾಗಿ ಮಾಡಿದ್ದಾರೆ ಅದೇ ರೀತಿ ಎಚ್ ಆಂಜನೇಯ ಅವರನ್ನು ಕೂಡಾ ಸಚಿವರನ್ನಾಗಿ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೂ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಪತ್ರಗಳು ಸಲ್ಲಿಸಿ ರಾಜ್ಯದ್ಯಂತ ಪತ್ರಿಕಾ ಗೋಷ್ಠಿ ಹಾಗೂ ಹೋರಾಟಗಳು ನಡೆದಿವೆ.
ಅಖಿಲ ಭಾರತೀಯ ಕಾಂಗ್ರೆಸ್ ಅಧ್ಯಕ್ಷರಾದಂತ ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ಕಾಂಗ್ರೆಸ್ ಪಕ್ಷದ ಅಧಿನಾಯಕಿಯಾದ ಶ್ರೀಮತಿ ಸೋನಿಯಾ ಗಾಂಧಿ ಅವರು, ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು, ಸುರ್ಜೆವಾಲ ಸಾಹೇಬರು ಖಾಲಿ ಇರುವ ನಾಲ್ಕು ವಿಧಾನ ಪರಿಷತ್ತು ಸ್ಥಾನಗಳಲ್ಲಿ ಒಂದನ್ನು ಎಚ್ ಆಂಜನೇಯ ಅವರಿಗೆ ಕೊಟ್ಟು ಸಚಿವರನ್ನಾಗಿ ಮಾಡಬೇಕೆಂದು ಪ್ರಾರ್ಥಿಸಿದ್ದಾಗಿ ತಿಳಿದರು.
ಈ ಹಿಂದೆ ರಾಜಕೀಯ ಅಧಿಕಾರಕ್ಕಾಗಿ ಈ ಸನ್ನಿಧಿಯಲ್ಲಿ ಹಲವಾರು ರಾಜಕೀಯ ನಾಯಕರಾದ ಮಾಜಿ ಸಚಿವರಾದ ಶ್ರೀರಾಮುಲು, ಕೆ ಶಿವನಗೌಡ ನಾಯಕ, ಹಾಲಿ ಶಾಸಕರಾದ ಕರಿಯಮ್ಮ ಜಿ ನಾಯಕ್, ಬಸನಗೌಡ ತುರ್ವಿಹಾಳ, ಚನ್ನಾರೆಡ್ಡಿ ಪಾಟೀಲ್ ತೂನ್ನೂರು, ಕೆ ಪಿ ಎಸ್ ಸಿ ಅಧ್ಯಕ್ಷರಾದ ಶಿವಶಂಕರಪ್ಪ ಎಸ್ ಸಾಹುಕಾರ್ ಹಾಗೂ ಅನಿಲ್ ಲಾಡ್ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದು ಶಾಸಕರಾಗಿ ಸಚಿವರಾಗಿ ಅಧಿಕಾರ ಪಡೆದಿದ್ದಾರೆ ಹಾಗೂ ಹಾಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಕುಮಾರ್ ಅವರು ಕೂಡಾ ಹಿಂದೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ ನಂತರ ಕೆಪಿಸಿಸಿ ಅಧ್ಯಕ್ಷ ಉನ್ನತ ಸ್ಥಾನ ಪಡೆದಿದ್ದನ್ನು ಇಲ್ಲಿ ಅವರು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತ ಓಡ್ಕರ್, ಶಿವಶರಣಪ್ಪ ಗೋನಾಲ, ದೇವು ಬಿಳಾರ್, ಮರೆಣ್ಣ ಕೊಳ್ಳಿ ಹಾಗೂ ಇನ್ನಿತರರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ