ವಿಜಯನಗರ: ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆ ಅಡಿಯಲ್ಲಿ ಬರುವ ಚಿಕಿತ್ಸೆಗಳ ದರ ಪರಿಷ್ಕರಿಸಲು ತಜ್ಞರ ಸಮಿತಿಯನ್ನು ರಚಿಸಿದ್ದು,
ಈ ಸಮಿತಿಯ ಅಧ್ಯಕ್ಷರಾದ ಕೂಡ್ಲಿಗಿ ಜನಪ್ರಿಯ ಶಾಸಕರಾದ ಡಾ. ಎನ್ ಟಿ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 17-01-2025 ರ ಶುಕ್ರವಾರದಂದು ಸಭೆ ನಡೆಸಲಾಯಿತು.
ಈ ಯೋಜನೆಯಡಿ 2128 ಚಿಕಿತ್ಸೆಗಳು ಲಭ್ಯವಾಗಲಿದ್ದು, ಬಡವರ್ಗದ ಹಿತ ದೃಷ್ಟಿಯಿಂದ ಸಹಕಾರಿ ಇಲಾಖೆಯ ಮೂಲಕ 2023 ಜನವರಿಯಲ್ಲಿ ಯೋಜನೆಗೆ ರಾಜ್ಯ ಸರ್ಕಾರ ಮರುಚಾಲನೆ ನೀಡಲಾಗಿತ್ತು .
ಯಶಸ್ವಿನಿ ಯೋಜನೆಯಡಿಯೂ ಫಲಾನುಭವಿಗಳು ಗರಿಷ್ಠ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಇದರಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಸುಲಭ ಸಾಧ್ಯವಾಗಲಿದೆ.
ಈ ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಡಾ. ಕೃಷ್ಣಪ್ರಸಾದ್, ಡಾ. ಎಚ್.ಆರ್ ಜಗದೀಶ್, ಡಾ.ಮನೋಹರ, ಡಾ.ಶ್ರೀನಿವಾಸ, ಡಾ.ಪಾಂಡು ದಾಸಪ್ಪ ಡಾ.ನಿತಿನ್ ಕುಮಾರ್, ಡಾ.ದಯಾನಂದ ಮಂಜುನಾಥ್ ಹಾಗೂ ಶ್ರೀ ಲಿಂಗರಾಜ ಸಹಕಾರ ಸಂಘಗಳ ನಿಬಂಧಕರು (ಕೈ ಹಾಗೂ ಹೈ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶಸ್ವಿನಿ ಟ್ರಸ್ಟ್ ಕಾರ್ಯದರ್ಶಿ ಶ್ರೀ ವೆಂಕಟಸ್ವಾಮಿ ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್,ಕಲ್ಲಹಳ್ಳಿ ಟಿ
