
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿಯ ಆಜೂರು ಪ್ರತಿಷ್ಠಾನವು ಅತ್ಯುತ್ತಮ ಪುಸ್ತಕ ರಚನೆಗಾಗಿ ಸಾಹಿತಿಗಳಿಗೆ ಕೊಡಮಾಡುವ 2025ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಕನ್ನಡ ವರ್ಣಾಕ್ಷರಗಳಲ್ಲಿ ವಿಶಿಷ್ಟ ಚುಟುಕು ಕಾವ್ಯಗಳನ್ನು ಬರೆದ “ಅಕ್ಷರ ಭಾಗ್ಯ” ಕೃತಿಯ ಕವಯಿತ್ರಿ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರನ್ನು ಆಯ್ಕೆ ಮಾಡಲಾಗಿದ್ದು, ದಿನಾಂಕ 26-1-2025 ರಂದು ಹಾರೋಗೇರಿಯಲ್ಲಿ ಜರುಗಲಿರುವ ಲಿಂ.ರಾಮಪ್ಪ ಬ. ಆಜೂರು,ಶ್ರೀಮತಿ ಗಂಗಮ್ಮ ರಾ. ಆಜೂರು ಇವರ 35ನೇ ಗಂಗಾರಾಮೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.
