ಬಾಗಲಕೋಟೆ/ ಹುನಗುಂದ :12 ನೇ ಶತಮಾನದ ಬಸವಾದಿ ಶರಣರ ವಚನಗಳು ಮಾನವನ ಶ್ರೇಷ್ಠ ಬದುಕಿಗೆ ದಾರಿಯಾಗಿವೆ ಎಂದು ಶೇಗುಣಸಿಯ ಡಾ.ಮಹಾಂತ ಪ್ರಭುಸ್ವಾಮಿಗಳು
ಹೇಳಿದರು.
ಅವರು ಇತ್ತೀಚೆಗೆ ಹುನಗುಂದದ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಶರಣ ದಂಪತಿಗಳಾದ ಲಿಂ.ಚೆನ್ನಮ್ಮ ಲಿಂ. ನೀಲಕಂಠಪ್ಪ
ಹಾದಿಮನಿಯವರ 8 ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ
29 ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಸವಾದಿ ಶರಣರ
ವಚನಗಳ ಸಂದೇಶ ಕೊನೆಯಲ್ಲಿ ಕಾಣುತ್ತೇವೆ. ಶರಣರು ಬರೆದ ವಚನಗಳಲ್ಲಿ ಬದುಕಿನ ಮೌಲ್ಯಗಳನ್ನು ಕಾಣುತ್ತೇವೆ ವಚನಗಳ ಹಾದಿಯಲ್ಲಿ
ನೀಲಕಂಠ ಮಾಸ್ತರರು ಶಿಕ್ಷಕ ವೃತ್ತಿಯುದ್ದಕ್ಕೂ ಮಕ್ಕಳ ಬದುಕಿಗೆ ಶ್ರೇಷ್ಠ ಮೌಲ್ಯಗಳನ್ನು ಬಿತ್ತಿದ ಪರಿಣಾಮವೇ ಅವರ ವಿಧ್ಯಾರ್ಥಿಗಳು ಸಮಾಜದಲ್ಲಿ
ಉನ್ನತ ಸ್ಥಾನಮಾನ ಹೊಂದಿದ್ದಾರೆ ಎಂದರು.
ಸಭೆಯಲ್ಲಿ ಚೆನ್ನ ನೀಲಕಂಠ ಪ್ರಕಾಶನದಿಂದ ಪ್ರೊ. ಎಸ್.ಎಸ್. ಮುಡಪಲದಿನ್ನಿಯವರು ಬರೆದ ಮಾರ್ಗ ಮಧ್ಯೆ ಎಂಬ ವಿಮರ್ಶಾ ಕೃತಿ ಹಾಗೂ ಡಾ. ಎಂ.ಬಿ. ಒಂಟಿಯವರು ಬರೆದ ರಂಗಸಿರಿ ಎಂಬ ಎರಡು ಕೃತಿಗಳನ್ನು ಪೂಜ್ಯರು ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಈ ವರ್ಷದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಚಿಕ್ಕಮಾಗಿ ಸರ್ಕಾರಿ ಶಾಲೆಯ
ಶಶಿಧರ ಹಳ್ಳೂರ, ಗಡಿಸುಂಕಾಪುರ ಸರ್ಕಾರಿ ಶಾಲೆಯ ಸುವರ್ಣ ಬಡಿಗೇರ ಇವರಿಬ್ಬರೂ ಪ್ರಶಸ್ತಿಗೆ
ಭಾಜನರಾದರು.
ಲೋಕಾರ್ಪಣೆಗೊಂಡ ಕೃತಿಗಳ ಪರಿಚಯವನ್ನು ಶಿಕ್ಷಕ ಎಸ್.ಕೆ.ಕೊನೆಸಾಗರ ಮಾಡಿದರು
ಸಭೆಯ ಸಾನಿಧ್ಯ ವಹಿಸಿದ ಚಿತ್ತರಗಿ ಸಂಸ್ಥಾನಮಠದ
ಮ.ನಿ. ಪ್ರ. ಗುರು ಮಹಾಂತ ಸ್ವಾಮಿಗಳು ಲಿಂ. ಚೆನ್ನಮ್ಮ ಲಿಂ. ನೀಲಕಂಠಪ್ಪ ದಂಪತಿಗಳು ಆದರ್ಶ ಜೀವನ ನಡೆಸಿ ಶಿಕ್ಷಕರಾಗಿ ಸಾವಿರಾರು ಮಕ್ಕಳ ಹೃದಯದಲ್ಲಿ ಜೀವಂತವಾಗಿದ್ದಾರೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎ. ಎಸ್. ಪಾವಟೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ
ಡಾ.ಶಿವಗಂಗಾ ರಂಜಣಗಿ, ತಾಲೂಕಾ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭು ಮಾಲಗಿತ್ತಿಮಠ,ದತ್ತಿ ದಾನಿಗಳಾದ ಡಾ.ಎಸ್.ಎನ್.ಹಾದಿಮನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಜಯ ಮಹಾಂತೇಶ ಪ್ರೌಢಶಾಲೆಯ ವಿಧ್ಯಾರ್ಥಿನಿಯರು ವಚನ
ಪ್ರಾರ್ಥನೆ ಮಾಡಿದರು. ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಎಸ್.ಎನ್.ಹಾದಿಮನಿ
ಪ್ರಾಸ್ತಾವಿಕವಾಗಿ ಮಾತನಾಡಿದರು
ಪರಿಷತ್ತಿನ ಕಾರ್ಯದರ್ಶಿ ಸಂಗಮೇಶ ಹೊದ್ಲೂರ ಕಾರ್ಯಕ್ರಮ ನಿರೂಪಣೆ ಮಾಡಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.
