ಶಿವಮೊಗ್ಗ : ಶಿವಮೊಗ್ಗ ತಾಲೂಕು ಕುಂಬಾರ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು 14 ನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ದಿನಾಂಕ 19 1 2025 ನೇ ಭಾನುವಾರ ಶಿವಮೊಗ್ಗ ಸೆಂಟ್ರಲ್ ರೋಟರಿ ಭವನ ಹಾಲ್ ನಲ್ಲಿ ನೆರವೇರಿತು.
ಶಿವಮೊಗ್ಗ ತಾಲ್ಲೂಕು ಕುಂಬಾರ ಸಂಘದ ಅಧ್ಯಕ್ಷರಾದ ಶ್ರೀಯುತ ಎಸ್ ಮಣಿಯವರು ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷ ಭಾಷಣ ಮಾಡುತ್ತಾ ಕುಂಬಾರರ ವೃತ್ತಿ ಉಳಿಸಿ, ಮಣ್ಣಿನಿಂದ ಮಾಡಿದ ವಸ್ತುಗಳು ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ,ಹೀಗಿದ್ದು ಇವುಗಳ ಬಗ್ಗೆ ಜನತೆಗೆ ಕಾಳಜಿಯೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚುತ್ತಿದೆ ಇವುಗಳು ಪರಿಸರಕ್ಕೆ ಮಾರಕ ಎಂಬುದು ತಿಳಿದಿದ್ದರೂ ಬಹುಪಾಲು ಜನತೆ ಯಥೇಚ್ಛವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿದ್ದಾರೆ ಎಂದರು ಕುಂಬಾರ ವೃತ್ತಿಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ಇಂದು ಆರ್ಥಿಕವಾಗಿ ಸಂಕಷ್ಟದಲ್ಲಿವೆ ಎಂದು ತಿಳಿಸಿದರು ಹಾಗೂ ನಮ್ಮ ಸಮುದಾಯದಲ್ಲಿ ಈ ಬಗ್ಗೆ ಎಲ್ಲಾ ಸೇರಿ ಜಾಗೃತಿ ಮೂಡಿಸಿ ಮತ್ತು ಸರ್ಕಾರದ ಗಮನ ಸೆಳೆಯಬೇಕೆಂದು ತಿಳಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಓಬಯ್ಯ ನಿವೃತ್ತ ಹಿರಿಯ ವ್ಯವಸ್ಥಾಪಕರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಇವರು ಮಾತನಾಡುತ್ತಾ ಶಿವಮೊಗ್ಗ ತಾಲೂಕು ಮಟ್ಟದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಈ ರೀತಿ ಕಾರ್ಯಕ್ರಮವು ಹೆಚ್ಚು ಹೆಚ್ಚು ಮಾಡಬೇಕು ಎಂದು ಜೊತೆಗೆ ಕುಂಬಾರ ವೃತ್ತಿಗೆ ನೆರವು ಪ್ರೋತ್ಸಾಹ ಅತ್ಯಗತ್ಯ ಇದೆಯೆಂದು ತಿಳಿಸಿದರು ತಾಲೂಕು ಕುಂಬಾರ ಸಂಘದ ನಿರ್ದೇಶಕರಾದ ಈಶ್ವರ್ ಬಿ ವಿ ರವರು ಮಾತನಾಡುತ್ತಾ ಕುಂಬಾರರು ಮಣ್ಣಿನ ಮಾಂತ್ರಿಕರು ಮಾನವನ ಅತ್ಯಂತ ಹಳೆಯ ಆವಿಷ್ಕಾರಗಳಲ್ಲಿ ಕುಂಬಾರಿಕೆಯು ಒಂದಾಗಿದೆ ಕುಂಬಾರಿಕೆ ಯಾವಾಗಲೂ ಆಂತರಿಕ ಕಲಾತ್ಮಕ ಗುಣಗಳನ್ನು ಹೊಂದಿದೆ ಇಂದಿನ ಯುವ ಪೀಳಿಗೆಗೆ ಕುಂಬಾರಿಕೆಯ ಇತಿಹಾಸವನ್ನು ತಿಳಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಇತ್ತೀಚಿನ ದಿನಗಳಲ್ಲಿ ಮತ್ತೆ ದೇಸಿ ವಸ್ತುಗಳ ಬಳಕೆ ಹೆಚ್ಚಾಗಿದ್ದು ಬೇಸಿಗೆ ಆರಂಭವಾಗುತ್ತಿರುವ ಈ ಸಮಯದಲ್ಲಂತೂ ಈ ನಡುವೆ ಜನರು ಆರೋಗ್ಯದ ದೃಷ್ಟಿಯಿಂದ ರೆಫ್ರಿಜಿರೇಟರ್ ನಲ್ಲಿರುವ ನೀರಿಗಿಂತ ಮಣ್ಣಿನ ಮಡಿಕೆಯ ನೀರೇ ಉತ್ತಮ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ 10 ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೆ ಚಂದ್ರು, ಶ್ರೀಮತಿ Y.N.ಭಾಗ್ಯಲಕ್ಷ್ಮಿ, ಶ್ರೀ ಕೆ.ಬಿ ಪದ್ಮನಾಥ್, ಶ್ರೀ ರಾಘವೇಂದ್ರ, ಶ್ರೀ ಈಶ್ವರಪ್ಪ ಉಪಸ್ಥಿತರಿದ್ದರು ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ M.K ಶ್ರೀನಿವಾಸ್ ದೇವರಾಜ್ ರವೀಂದ್ರ ಕೆ ಟಿ ಸವಿತಾ ಮಂಜುನಾಥ್ ರೂಪ ಈಶ್ವರ್ ಚಂದ್ರಿಕಾಹರೀಶ್ ಯಶೋಧಸುಧೀರ್ ರಮೇಶ್ ಎಂ ಟಿ ಟಿ.ಎಸ್ ಕೃಷ್ಣಮೂರ್ತಿ ಅನಿತಾ ಓಬಯ್ಯ ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
