ವಿಜಯಪುರ ನಗರದ ಇಟ್ಟಂಗಿ ಭಟ್ಟಿಯಲ್ಲಿ ನಡೆದ ಕೂಲಿ ಕಾರ್ಮಿಕರ ಮೇಲೆ ಇಟ್ಟಂಗಿ ಭಟ್ಟಿ ಮಾಲಿಕ ಖೇಮು ರಾಥೋಡ್ ಹಾಗೂ ಆತನ ಬೆಂಬಲಿಗರು ಸೇರಿ ಕೂಲಿ ಕಾರ್ಮಿಕರಾದ ಸದಾಶಿವ ಬಸಪ್ಪ ಮಾದರ (27), ಸದಾಶಿವ ಚಂದ್ರಪ್ಪ ಬಬಲಾದಿ (38), ಉಮೇಶ ಮಾಳಪ್ಪ ಮಾದರ (25) ಎಂಬುವರ ಮೇಲೆ ಮನಸ್ಸು ಇಚ್ಛೆಯಂತೆ ಬಡಿದು ಮಾರಣಾಂತಿಕ ಹಲ್ಲೆ ಮಾಡಿ,
ಚಿತ್ರಹಿಂಸೆಯನ್ನು ನೀಡಿ ವಿಕೃತಿ ಮೆರೆದಿದ್ದಾರೆ ಇವರೇನು ಮನುಷ್ಯರೋ ಇಲ್ಲ, ರಾಕ್ಷಸರೋ ಎನ್ನುವ ಭಾವನೆ ಮೂಡುತ್ತದೆ.
ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ ಸದ್ಯ ಮೂವರು ಕಾರ್ಮಿಕರು ಕಳೆದ ಮೂರು ದಿನಗಳಿಂದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದರಿ ಘಟನೆ ಸಂಬಂಧಿಸಿದಂತೆ ಕೂಲಿ ಕಾರ್ಮಿಕರು ಇಟ್ಟಂಗಿ ಬಟ್ಟೆಯ ಮಾಲೀಕ ಖೇಮು ರಾಥೋಡ್ ಹತ್ತಿರ ಕೂಲಿ ಕೆಲಸ ಮಾಡುತ್ತಿದ್ದ ಇವರು ಹಬ್ಬಕ್ಕೆಂದು ಊರಿಗೆ ಹೋಗಿ ಮತ್ತೆ ಮರಳಿ ಕೆಲಸಕ್ಕೆ ತಡವಾಗಿ ಬಂದಿದ್ದರಿಂದ ಇವರ ಮೇಲೆ ಮನಸೋ ಇಚ್ಚೆ ಬಡಿದು ಮಾರಣಾಂತಿಕ ಹಲ್ಲೆ ಮಾಡಿದ್ದ ಇವರ ಮೇಲೆ ಸರ್ಕಾರ ಕಠಿಣ ಶಿಕ್ಷೆಯನ್ನು ನೀಡಿ ಹಲ್ಲೆಗೊಳಗಾದ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕೆಂದು ಯಾದಗಿರಿ ಜಿಲ್ಲಾ ಮಾದಿಗ ಮೀಸಲಾತಿ (ಎಂ ಆರ್ ಎಚ್ ಎಸ್) ಜಿಲ್ಲಾ ಕಾರ್ಯದರ್ಶಿ ಮಲ್ಲು ಹಲಗಿ ಕುರಕುಂದ, ಹಣಮಂತ ಮಾಲಹಳ್ಳಿ, ಮರ್ಲಿಂಗ ಒರಟೂರ್, ಸುರೇಶ ಹಾಲಗೇರಾ, ಹಣಮಂತ ಓಡ್ಕರ್, ಶಿವ ಶರಣಪ್ಪ ಗೋನಾಲ, ದೇವು ಬಿಳಾರ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
