ಶ್ರೀ ಮಾಣಿಕಪ್ಪ ರಾಂಪುರೆ ರವರ 9ನೇ ವರ್ಷದ ಸ್ಮರಣಾರ್ಥ ದಿನದ ಅಂಗವಾಗಿ, ನಂದಗಾವ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಿದ ವಕೀಲರಾದ ಸತೀಶ್ ರಾಂಪೂರೆ.
ಬೀದರ್ ತಾಲೂಕಿನ ನಂದಗಾವ್ ಗ್ರಾಮದಲ್ಲಿ ಶ್ರೀ ಮಾಣಿಕಪ್ಪ ರಾಂಪುರೆ ಅವರ ಸ್ಮರಣೆಯ ನೆನಪಿಗೋಸ್ಕರ ಇಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 10 ತಂಡ ಮಾಡಲಾಗಿದೆ, ಹತ್ತರಲ್ಲಿ ಎರಡು ಹೊಸ ರೂಪ ಬಂದಿದೆ. ಒಂದು ಚಂದನಹಳ್ಳಿ ಇನ್ನೊಂದು ಕಬಿರಾವಾಡಿ ಎಂಬುದಾಗಿ ಎರಡು ಗ್ರಾಮಗಳ ಎ ಮತ್ತು ಬಿ ಗುಂಪುಗಳಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದೇ ತಿಂಗಳ 29 ರಂದು ಸೆಮಿ ಫೈನಲ್ ಪಂದ್ಯ ಇರುತ್ತೆ ಎಂದು ಹೇಳಿದ್ದಾರೆ. ಪ್ರತಿ ವರ್ಷವೂ ಮೊದಲನೇ ಬಹುಮಾನ ವಿನ್ನರ್ ಅಪ್ ಪವರ್ ಗೆ 25000/- ಸಾ.ರೂ. ಹಾಗೂ ಕಪ್ ಕೂಡಾ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಮತ್ತು ಯುವಕರ ಸಹಾಯದಿಂದ ಮತ್ತು ಹುಮ್ನಾಬಾದ್ ಪಟ್ಟಣದ ಶಕೀಲ್ ರವರು ಮತ್ತು ಭಾಖಿಭಾಯ್ ರವರು , ಸಂಜು ವಡ್ಡನ್ಕೆರೆ ರವರು, ಮತ್ತು ಪಂಡಿತ್ ಕಬೀರ್ವಾಡೆ ರವರು ಈ ಒಂದು ಟೂರ್ನಮೆಂಟ್ ಗೆ ಸಹಾಯಕಾರಿಯಾಗಿದ್ದಾರೆ ಎಂದು ವಕೀಲರಾದ ಸತೀಶ್ ರಾಂಪುರೆ ರವರು ತಿಳಿಸಿದ್ದಾರೆ.
ವರದಿ: ರೋಹನ್ ವಾಘಮಾರೆ
