ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಶ್ರೇಷ್ಠ ವಚನಕಾರರು ಹಾಗೂ ಸ್ವಗ್ರಾಮದವರಾದ ಕೋಲ ಶಾಂತಯ್ಯನವರ ವೇದಿಕೆಯನ್ನು ಕಲ್ಪಿಸಿದ ಜೇವರ್ಗಿ ಕನ್ನಡ ಸಾಹಿತ್ಯ ಪರಿಷತ್ತು ಸೌಕರ್ಯವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು ಎಂದು ಕನ್ನಡಾಭಿಮಾನಿಗಳು ಸಂತೋಷ ವ್ಯಕ್ತಪಡಿಸಿದರು.
ನಮ್ಮ ಗ್ರಾಮದಲ್ಲಿ ಶ್ರೇಷ್ಠ ವಚನಕಾರರಾದ ಕೋಲ ಶಾಂತಯ್ಯನವರು ನಮ್ಮ ಗ್ರಾಮದವರೇ ಎಂದು ನಮಗೆ ತಿಳಿದೇ ಇರಲಿಲ್ಲ ಇವರು ನೂರಾರು ವಚನಗಳನ್ನು ಬರೆದು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿದರು.
ಕ.ಸಾ.ಪ ಇಂತಹ ಹೊಸ-ಹೊಸ ವಿಷಯವನ್ನು ನಮ್ಮ ಕನ್ನಡಾಭಿಮಾನಿಗಳಿಗೆ ಪರಿಚಯಿಸುತ್ತಿರುವ ಕಾರ್ಯ ಬಹಳ ಮಹತ್ವದ್ದಾಗಿದೆ ಎಂದು ಅಭಿಮಾನಿಗಳೆಲ್ಲರೂ ಖುಷಿ ಪಟ್ಟರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸೊನ್ನದ ದಾಸೋಹ ಮಠದ ಪೂಜ್ಯ ಶ್ರೀ ಮ.ನಿ.ಪ್ರ ಡಾ. ಶಿವಾನಂದ ಮಹಾ ಸ್ವಾಮಿಗಳು, ಸಿದ್ದಲಿಂಗ ಮಹಾ ಸ್ವಾಮಿಗಳು ವಿರಕ್ತ ಮಠ ನೆಲೋಗಿ, ಶಾಸಕರು, ರಾಜಕೀಯ ಧುರೀಣರು, ಕ ಸಾ ಪ ಕೇಂದ್ರ ಸಮಿತಿ, ರಾಜ್ಯ ಸಮಿತಿ, ಜಿಲ್ಲಾ ಮತ್ತು ತಾಲೂ ಸಮಿತಿ ಹಾಗೂ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕ.ಸಾ.ಪ ತಾಲೂಕು ಗೌರವ ಅಧ್ಯಕ್ಷರಾದ ಶ್ರೀ ಚನ್ನಮಲ್ಲಯ್ಯ ಹಿರೇಮಠ ರವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮವು ಕನ್ನಡ ಸಾಹಿತ್ಯದ ವಿವಿಧ ಗೋಷ್ಠಿಗಳು, ನಗೆ ಹಬ್ಬ, ಮೆರವಣಿಗೆ ನಡೆಯಲಿವೆ ಹಾಗಾಗಿ ಎಲ್ಲಾ ಕನ್ನಡಾಭಿಮಾನಿಗಳು ದಿನಾಂಕ 25-01-2025 ರಂದು ನೆಲೋಗಿ ಗ್ರಾಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.
ಕ.ಸಾ.ಪ ತಾಲೂಕ ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರಾದಾರ ರವರು ಕೋಲ ಶಾಂತಯ್ಯನವರ ಆದರ್ಶ ಮತ್ತು ವಚನಗಳನ್ನು ನಾವು ತಿಳಿದುಕೊಳ್ಳುವ ಪ್ರಮುಖ ವೇದಿಕೆಯಾಗಿದೆ ಅದರಲ್ಲಿ ಅವರ ಪ್ರಮುಖ ವಚನಗಳಲ್ಲೊಂದಾದ…
ಸತ್ತ ಹಾವು ಹೆಣನ ಕಚ್ಚಿ ಮತ್ತೆ ಸತ್ತಿತ್ತು.
ಸತ್ತುದ ಕಂಡು ಹದ್ದು ಎತ್ತಲಾಗಿ,
ಎತ್ತಿದ ಬೆಂಬಳಿಯಲ್ಲಿ ಹಾವಿನ ಜೀವವೆದ್ದು
ಹೆಡೆಯನೆತ್ತಿ ಆಡಲಾಗಿ, ಹದ್ದು ಬಿಟ್ಟಿತ್ತು;
ಹಾವು ಹಾವಡಿಗಂಗೆ ಈಡಾಯಿತ್ತು.
ಆ ಹದ್ದು ಹಿಡಿದು ಬಿಟ್ಟೆನಲ್ಲಾ ಎಂದು ಮರೆದೊರಗಿತ್ತು.
ಹಾವು ಹದ್ದು ಕೂಡಿ ಬದುಕಿದವು; ಅದೇನುಕಾರಣವೆಂಬುದನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
ಎಂಬ ವಚನವನ್ನು ಹೇಳಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.
ವರದಿ: ಚಂದ್ರಶೇಖರ ಪಾಟೀಲ್ ಗುಡೂರ ಎಸ್ ಎನ್
