ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಿಜಯಪುರ ರಸ್ತೆಯ ಹತ್ತಿರವಿರುವ ಪ್ರತಿಷ್ಠಿತ “ಮಹಾತ್ಮ ಗಾಂಧೀಜಿ ರೈತ ಕಲ್ಯಾಣ ಸಂಸ್ಥೆ” ಯ ಅಡಿಯಲ್ಲಿ ನಡೆಯುತ್ತಿರುವ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ “ಗುರುಕುಲ ಉತ್ಸವ 2025” ರ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ.ಬ್ರ.ಡಾ. ರುದ್ರಮುನಿ ಶಿವಾಚಾರ್ಯರು ಮಡಿವಾಳೇಶ್ವರ ಮಹಾ ಮಠ ಕಡಕೋಳರವರು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಗುರುಕುಲ ಶಾಲೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ರಸಪ್ರಶ್ನೆ,ಪೂರ್ವ ಸಿದ್ದತಾ ಪರೀಕ್ಷೆ,ಚರ್ಚಾ ಸ್ಪರ್ಧೆ, ಬೆಳಿಗ್ಗೆ ಹಾಗೂ ಸಾಯಂಕಾಲ ವಿಶೇಷ ತರಗತಿಯ ಫೌಂಡೇಶನ್ ಕ್ಲಾಸ್ ಹಾಗೂ ಇನ್ನಿತರ ಅರ್ಥಗರ್ಭಿತವಾಗಿ ಸಂಸ್ಕೃತಿಕ ಚಟುವಟಿಕೆಗಳು ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯನ್ನು ಭೋದಿಸಿ ತಾಲೂಕಿನಲ್ಲೆ ಹೆಸರು ವಾಸಿಯಾಗಿ ಸಂಸ್ಥೆಯು ಹೆಮ್ಮರವಾಗಿ ಬೆಳೆದು ನಿಂತಿದೆ.
ವಿಶೇಷವಾಗಿ SSLC ಮತ್ತು PUC ಮೊದಲ ವರ್ಷದ ವಿಜ್ಞಾನ ವಿಭಾಗದಲ್ಲಿ ನೀಟ್ ಪರೀಕ್ಷೆಯಲ್ಲಿ ಗಣನೀಯವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯು ಗೌರವಿಸಿ ಸನ್ಮಾನಿಸಿದ್ದು ನೋಡಿ ನನಗೆ ಆನಂದ ಭಸ್ಮ ಉಂಟಾಯಿತು ಎಂದು ರುದ್ರಮುನಿ ಶಿವಚಾರ್ಯರು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರು ಹಾಗೂ ಕೆಕೆಆರ್ ಡಿ ಬಿ ಅಧ್ಯಕ್ಷರ ಪರವಾಗಿ ಕಾಂಗ್ರೆಸ್ ಯುವ ಧುರೀಣರಾದ ಶ್ರೀ ಶಿವಲಾಲ್ ಸಿಂಗ್ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೇದಾರಲಿಂಗಯ್ಯ ಹಿರೇಮಠ ಅಧ್ಯಕ್ಷರು ಮಹಾತ್ಮ ಗಾಂಧೀಜಿ ರೈತ ಕಲ್ಯಾಣ ಸಂಸ್ಥೆ ಜೇವರ್ಗಿಯವರು ವಹಿಸಿಕೊಂಡಿದ್ದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ದೊಡ್ಡಪ್ಪಗೌಡ ಎಸ್ ಪಾಟೀಲ್ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರು,ಕಲಬುರಗಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಶ್ರೀ ಶಿವರಾಜ ಪಾಟೀಲ್ ರದ್ದೆವಾಡಗಿ, ಶ್ರೀ ರಾಜಶೇಖರ ಸಾಹೂ ಸೀರಿ ಕಾರ್ಯದರ್ಶಿಗಳು ಅ.ಭಾ.ವೀರಶೈವ ಲಿಂಗಾಯತ್ ಮಹಾ ಸಭಾ ಬೆಂಗಳೂರು, ಕ.ಸಾ.ಪ ಗೌರವ ಅಧ್ಯಕ್ಷರಾದ ಶ್ರೀ ಚನ್ನಮಲ್ಲಯ್ಯ ಹಿರೇಮಠ, ತಹಸೀಲ್ದಾರರಾದ ಶ್ರೀ ಮಲ್ಲಣ್ಣ ಯಲಗೋಡ್, ತಾಲೂಕ ಪಂಚಾಯತ್ ಇ ಓ ರವೀಂದ್ರ ಲಕ್ಕುಂಡಿ, ಕ್ಷೇತ್ರ ಶಿಕ್ಷಣಾಧಿಕಾರಗಳಾದ ಶ್ರೀ ವೀರಣ್ಣ ಬೊಮ್ಮನಹಳ್ಳಿ, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಮಹಾಂತಯ್ಯ ಸಿ ಹಿರೇಮಠ, ಪಿಎಸ್ಐ ಶ್ರೀ ಗಜಾನಂದ ಬಿರಾದಾರ, ಎನ್ ಎಮ್ ಪಾಟೀಲ್, ಸಮಾಜ ಸೇವಕರಾದ ಶ್ರೀ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ,ಶಾಲೆಯ ಮುಖ್ಯ ಗುರುಗಳು, ಸಿಬ್ಬಂದಿ ವರ್ಗದವರು, ಪಾಲಕ/ಪೋಷಕ ಬಂಧುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ ಪಾಟೀಲ್, ಗುಡೂರ ಎಸ್ ಎನ್
