ನೀ ಹೋದ ಮರುದಿನ
ನಾ ಹೆಂಗ ಬಾಳಲಿ
ನಿನ್ನಂಗ ಪ್ರೀತಿ ಮಾಡುವವರು ಬರಲಿಲ್ಲ ಇನ್ನೂ ತನಕ
ಪ್ರತಿನಿತ್ಯ ಎದ್ದಾಗ ನಿನದೇ ನೆನಪು ಮನದಾಗ
ಹೋದ ಹೋದಲ್ಲೆಲ್ಲ ನೆನಪುಗಳ ಸರಮಾಲೆ
ಮನ ನೋಂದಾವ ಒಡಲಾಗ
ಎಲ್ಲಿ ಕೇಳಿದರಲ್ಲಿ ಗುಣಗಾನಗಳ ಸದ್ದು ದುಃಖ ತರದ ನೋವುಗಳು ನನಗ ತಮ್ಮಂಗೆ ಬದುಕಿದ್ರೆ ಗೌರವ ನೀಡುವರು ತಂದೆಗೆ ತಕ್ಕ
ಮಗಳಂತೆ
ನಿನ್ನ ಪ್ರೀತಿ ಕರಳ ಬಳ್ಳಿ ಕಳಕೊಂಡ ಬರಡು ಭೂಮಿ ನಾನು
ಮನ ತುಂಬ ದುಃಖದ ಮುದ್ರೆ ಹೊತ್ತವಳು ಅಪ್ಪ
ರಚನೆ ಅನುರಾಧ ಡಿ ಸನ್ನಿ
