ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬಡ ರೈತಾಪಿ ದಂಪತಿಗಳಾದ ಶ್ರೀ ಸದಾಶಿವಪ್ಪ ಮತ್ತು ಗಂಗಮ್ಮ (ಮಲ್ಲಮ್ಮ) ಇವರ ಮಗನಾದ ಶ್ರೀ ಯುತ ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್. ರವರನ್ನು ಬೆಳಗಾವಿಯ ಸಿರಿ ಕನ್ನಡ ವೇದಿಕೆಯು ರಾಷ್ಟ್ರೀಯ ಜ್ಞಾನಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ,ಇವರ ಸಾಹಿತ್ಯ ಶೈಲಿಯ ವಿಶೇಷತೆ ಮತ್ತು ಅತ್ಯುತ್ತಮ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ . ಪುರಸ್ಕಾರವನ್ನು ಜನವರಿ 26 ನೇ ತಾರೀಖು ಕಾರ್ಯಕ್ರಮದಲ್ಲಿ ಗೌರವಯುತವಾಗಿ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಎಲ್, ಎಸ್,ಪೆಂಡಾರಿಯವರು ತಿಳಿಸಿದ್ದಾರೆ.
ಇವರು ಸುಮಾರು ಐನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ಧು ಎರಡು ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ಸಾಹಿತ್ಯ, ಸಾಮಾಜಿಕ ಸೇವೆಗಳಲ್ಲಿಯೂ ತೊಡಗಿಕೊಂಡಿದ್ಧು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಓದುಗರಿಗೆ ಉಚಿತವಾಗಿ ಕೊಟ್ಟಿದ್ದಾರೆ.
400 ಕ್ಕೂ ಹೆಚ್ಚು ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ದಾನಿಗಳನ್ನು ಪ್ರೇರೇಪಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ರೋಗಿಗಳಿಗೆ ರಕ್ತ ಒದಗಿಸಿಕೊಟ್ಟಿದ್ಧಾರೆ.
ಇವರು ಲೇಖನ,ವಚನ, ಚುಟುಕು, ಹನಿಗವನ, ಟಂಕಾ, ರುಬಾಯಿ, ಹಾಯ್ಕು ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸಬಲ್ಲರು.
