ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಚನ್ನರಾಯಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಪುರಸಭೆ ಮುಖ್ಯ ಅಧಿಕಾರಿ ಯತೀಶ್ ಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಮನವಿ
ಹಾಸನ ಜಿಲ್ಲೆ ಚನ್ನರಾಯಪಟ್ಟಣ ಪಟ್ಟಣವು ಹಾಸನ ಜಿಲ್ಲೆಯ ಮದ್ಯ ಭಾಗದಲ್ಲಿದ್ದು ವಾಣಿಜ್ಯ ವ್ಯವಹಾರಗಳ ಪ್ರಮುಖ ಕೇಂದ್ರವಾಗಿರುತ್ತದೆ. ಅಲ್ಲದೇ ಪಟ್ಟಣವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು ಚನ್ನರಾಯಪಟ್ಟಣದಲ್ಲಿ ಪ್ರಮುಖ ಶಾಲಾ ಕಾಲೇಜುಗಳು ಇರುವುದರಿಂದ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ವಿಧ್ಯಾರ್ಥಿಗಳು ವಿದ್ಯಾಭ್ಯಾಸದ ಸಲುವಾಗಿ ಚನ್ನರಾಯಪಟ್ಟಣಕ್ಕೆ ಬಂದು ಹೋಗುತ್ತಿರುತ್ತಾರೆ. ಅಲ್ಲದೇ ರೈತರು ಬೆಳೆದ ತರಕಾರಿ, ದವಸದಾನ್ಯಗಳ ವ್ಯಾಪಾರಕ್ಕಾಗಿ ತಮ್ಮ ಜಮೀನುಗಳಿಗೆ ಅವಶ್ಯಕತೆ ಇರುವ ಪ್ರಮುಖ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಚನ್ನರಾಯಪಟ್ಟಣಕ್ಕೆ ಬಂದು ಹೋಗುತ್ತಿರುತ್ತಾರೆ. ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ವಾಣಿಜ್ಯ ಮಳಿಗೆಗಳಿದ್ದು, ವ್ಯಾಪಾರ ವಹಿವಾಟಿನಿಂದ ಪಟ್ಟಣದಲ್ಲಿ ಅತೀ ಹೆಚ್ಚು ಜನರು ಸೇರುತ್ತಾರೆ. ಯಾವುದೇ ಪ್ರಕರಣಗಳಾದಾಗ ಅತೀ ಶೀಘ್ರವಾಗಿ ಪತ್ತೆ ಹಚ್ಚಲು ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಠಿಯಿಂದ ಚನ್ನರಾಯಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸುವ ಅವಶ್ಯಕತೆ ಇರುವುದರಿಂದ ತಮ್ಮ ಪುರಸಭೆಯ ವತಿಯಿಂದ ಸಿ,ಸಿ ಕ್ಯಾಮೆರಾಗಳನ್ನು ಅಳವಡಿಸಲು ಕೋರಿದೆ.
ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ವರ್ಷ ಸಾಕಷ್ಟು ಅನುದಾನ ಹಲವು ಯೋಜನೆಗಳಿಂದ ಬರುತ್ತಿದೆ. ಆ ಅನುದಾನವನ್ನು ಕೆಲವೊಮ್ಮೆ ಬಳಕೆ ಮಾಡದೆ ಇರುವುದರಿಂದ ಅದು ಇಲ್ಲಿಯ ಸಾರ್ವಜನಿಕರಿಗೆ ಬಳಕೆಯಾಗದೆ ಸರ್ಕಾರಕ್ಕೆ ಹಿಂದಿರುಗುತ್ತಿದೆ. ಆ ಅನುದಾನವನ್ನು ಈ ಸಿ ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲು ಬಳಸಿಕೊಂಡರೆ ನಾರ್ವಜನಿಕರಿಗೆ ಅನುಕೂಲ ಆಗುವುದರ ಜೊತೆಗೆ ಪೊಲೀಸರಿಗೆ ಕೆಲಸದ ಒತ್ತಡವು ಸಹ ಕಡಿಮೆ ಆಗುತ್ತದೆ.ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗದ ಅಧ್ಯಕ್ಷರು ವರುಣ್ ಚಕ್ರವರ್ತಿ ಮತ್ತು ಸಾಮಾಜಿಕ ಹೋರಾಟಗಾರ ಮನೋಜ್ ನಾಯ್ಕ್,ಅಯೋಬ್ ಸಾಕಿಬ್ ಮತ್ತಿತರರು ಮನವಿ ಮಾಡಿದರು.
