ನೀ ಕಾಣುವ ಕನಸು ಒಳ್ಳೆಯದಿರಲಿ
ಕಲ್ಮಶವು ತುಂಬಿರದೆ ಶುಭ್ರವಾಗಿರಲಿ
ನಾನೆಂಬ ಅಹಂಕಾರವು ಇಣುಕದಿರಲಿ
ನಿಸ್ವಾರ್ಥ ಗುಣವು ನಿನ್ನಲ್ಲಿ ಅಡಗಿರಲಿ.
ಪರಿಶುದ್ಧ ಮನದಿ ಸ್ಥಿರತೆ ತುಂಬಿರಲಿ
ಚಂಚಲತೆ ಕೈಗೆ ಬುದ್ಧಿ ಹೋಗದಿರಲಿ
ಸದ್ಗುಣ ಸನ್ಮಾರ್ಗದ ನಡೆ ಕೂಡಿರಲಿ
ಕಾಯಕವೇ ಕೈಲಾಸ ತತ್ವವು ಇರಲಿ.
ಸೋಲೇ ತಾನೇ ಗೆಲುವಿನ ಸೋಪಾನ
ಸೋತು ನಡೆಯುತಿರೆ ನೀನು ಪ್ರತಿ ದಿನ
ಸರಾಗ ಸಾಗುವುದು ನೆಮ್ಮದಿ ಜೀವನ
ನೀನಾಗುವೆ ಆಗ ದೈವರೂಪ ಸಮಾನ.
ನಿನ್ನಯ ಸಾಧನೆಯ ಕಡೆಗೆ ಗಮನವಿಟ್ಟು
ಕನ್ನಡಾಂಬೆಯ ಸೇವೆಯ ಮನದಲಿಟ್ಟು
ಸಮಾಜದ ಏಳಿಗೆಗೆ ಸದಾ ಪಣತೊಟ್ಟು
ಸಾಗುತಿರು ನೀ ದುಷ್ಟ ಗುಣಗಳ ಬಿಟ್ಟು.
ಕನಸು ಕಾಣುವುದು ಎಂದೆಂದೂ ತಪ್ಪಲ್ಲ
ತಿರುಕನ ಬದುಕು ಬಾಳುವುದು ಒಳಿತಲ್ಲ
ಒಳಿತು ಕೆಡುಕುಗಳ ಗುಣಾಕಾರ ಬೇಕಲ್ಲಾ
ಧರ್ಮದ ಮಾರ್ಗವೇ ಇರಲಿ ನಮಗೆಲ್ಲಾ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ:-9740199896.
